Connect with us

Dvgsuddi Kannada | online news portal | Kannada news online

ಏ.1 ರಿಂದ ಭಾರತ್  ಸ್ಟೇಜ್ -4 ವಾಹನ ನೋಂದಣಿ ಇಲ್ಲ

ದಾವಣಗೆರೆ

ಏ.1 ರಿಂದ ಭಾರತ್  ಸ್ಟೇಜ್ -4 ವಾಹನ ನೋಂದಣಿ ಇಲ್ಲ

ಡಿವಿಜಿ ಸುದ್ದಿ, ದಾವಣಗೆರೆ: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಏ.1 ರಿಂದ  ಭಾರತ್  ಸ್ಟೇಜ್-4 (ಬಿ.ಎಸ್-4 )ಮಾದರಿಯ ಯಾವುದೇ ವಾಹನಗಳು ಮಾರಾಟ ಅಥವಾ ನೋಂದಣಿ ಮಾಡುವಂತಿಲ್ಲ ಎಂದು ಸಾರಿಗೆ ಆಯುಕ್ತರು ನಿರ್ದೇಶನ ನೀಡಿದ್ದಾರೆ.

ಈಗಾಗಲೇ ತಾತ್ಕಾಲಿಕ ನೋಂದಣಿಯಾಗಿರುವ ಹಾಗೂ ಇನ್ನೂ ಮಾರಾಟವಾಗದೆ ಇರುವ ಬಿಎಸ್-4 ಮಾದರಿಯ ಎಲ್ಲಾ ವರ್ಗಗಳ ವಾಹನಗಳನ್ನು ಮಾ.31 ರ ಒಳಗೆ ಖಾಯಂ ನೋಂದಣಿ ಮಾಡಿಕೊಳ್ಳಬೇಕು. ಮತ್ತು ಏ.1 ರಿಂದ ಯಾವುದೇ ಬಿಎಸ್-4 ವಾಹನಗಳನ್ನು ನೋಂದಣಿ ಮಾಡಲಾಗುವುದಿಲ್ಲ ಎಂದು ದಾವಣಗೆರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಜೆ ಬಣಕಾರ್ ಸೂಚಿಸಿದ್ದಾರೆ.

ವಾಯ ಮಾಲಿನ್ಯ ನಿಯಂತ್ರಿಸುವ ಸಲುವಾಗಿ 2020ರ ಎಪ್ರಿಲ್ 1ರಿಂದ ದೇಶದಾದ್ಯಂತ  ಭಾರತ್ ಸ್ಟೇಜ್ IV ವೆಹಿಕಲ್‌ನ್ನು ಮಾರಾಟ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಮೋಟಾರು ವಾಹನಗಳ ಮಾಲಿನ್ಯಕಾರಕಗಳನ್ನು ತಡೆಗಟ್ಟುವ ಸಲುವಾಗಿ ಭಾರತ್ ಸ್ಟೇಜ್ ಹೊರಸೂಸುವಿಕೆ ಮಾನದಂಡವನ್ನು ಸರ್ಕಾರ ರಚಿಸಿದೆ. ಎಪ್ರಿಲ್ 1ರಿಂದ ಭಾರತ್ ಸ್ಟೇಜ್ VI  ಎಮಿಶನ್ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top