ಡಿವಿಜಿ ಸುದ್ದಿ, ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಕಾಡಾ) ನೂತನ ಅಧ್ಯಕ್ಷರಾಗಿ ಪವಿತ್ರಾ ರಾಮಯ್ಯ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಮುತ್ತಿನಕೊಪ್ಪದ ಪವಿತ್ರಾ ರಾಮಯ್ಯ ರೈತ ಹೋರಾಟಗಾರ್ತಿ. ರೈತ ಪರ ಹೋರಾಟಗಳ ಗುರುತಿಸಿಕೊಂಡಿದ್ದಾರೆ. ಪತಿಯ ಗ್ರಾಮ ಕಾಚನಕಟ್ಟೆಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅವರು, ಜೆಡಿಎಸ್ ಮೂಲಕ ರಾಜಕೀಯ ಪ್ರವೇಶಿಸಿ ಬಿಜೆಪಿ ಸೇರಿದ್ದರು.



