ಡಿವಿಜಿ ಸುದ್ದಿ, ದಾವಣಗೆರೆ: ಕಳೆದ ಒಂದು ತಿಂಗಳ ಹಿಂದೆ ಜೂಜಾಟವಾಡಿ ಸಿಕ್ಕಿ ಬಿದ್ದಿದ್ದ ಬಿಇಒ ಕಚೇರಿಯ 7 ಸಿಬ್ಬಂದಿಯನ್ನು ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಪಿಬಿ ರಸ್ತೆಯಲ್ಲಿನ ಬಿಲಾಲ್ ಕಾಂಪೌಂಡ್ ಆವರಣದಲ್ಲಿ ಈ 7 ಸಿಬ್ಬಂದಿ ನಿಷೇಧಾಜ್ಞೆ ಉಲ್ಲಂಘಿಸಿ ಇಸ್ಪೀಟ್ ಆಡುತ್ತಿದ್ದರು. ದಾವಣಗೆರೆ ಉತ್ತರ ವಲಯದ ಬಿಇಒ ಕಚೇರಿಯ ಏಳು ಜನ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಉತ್ತರ ವಲಯದ ಅಧೀಕ್ಷಕ ಎಚ್.ಎಸ್. ಬಸವರಾಜ್, ಪ್ರಥಮ ದರ್ಜೆ ಸಹಾಯಕ ಎಂ.ಸುಧಾಕರ್, ದ್ವಿತೀಯ ದರ್ಜೆ ಸಹಾಯಕ ಕೊಟ್ರೇಶ್, ದ್ವಿತೀಯ ದರ್ಜೆ ಸಹಾಯಕ ಮಲ್ಲಿಕಾರ್ಜುನ್ ಮಠದ, ಶಿಕ್ಷಣ ಸಂಯೋಜಕ ಎಸ್. ಸೋಮಶೇಖರಪ್ಪ, ಡಿ.ಗ್ರೂಪ್ ನೌಕರ ಹರ್ಷವರ್ಧನ್, ಗುಮ್ಮನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕೆ.ಎಂ. ವೃಷಬೇಂದ್ರಪ್ಪ ಅಮಾನತುಗೊಂಡ ೇಳು ಜನ ಸಿಬ್ಬಂದಿಗಳಾಗಿದ್ದಾರೆ. ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.



