ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನ ಬಸವನಕೋಟೆ ಗ್ರಾಮದ ದುರುಗಪ್ಪ (60) ಎಂಬ ರೈತನ ಮೇಲೆ ಕರಡಿಗಳು ದಾಳಿ ಮಾಡಿವೆ.
ಬೆಳಗ್ಗೆ ತಮ್ಮ ಜಮೀನಿಗೆ ಹೋಗುವಾಗ ಹಿಂಬದಿಯಿಂದ ಎರಡು ಕರಡಿಗಳು ದಾಳಿ ಮಾಡಿವೆ. ರೈತ ದುರುಗಪ್ಪ ಗಂಭೀರವಾಗಿ ಗಾಯಗೊಂಡಿದ್ದಾನೆ. ಸತ್ತವರಂತೆ ಮಲಗಿದ್ದರಿಂದ ರೈತ ಬದುಕಿ ಉಳಿದಿದ್ದಾನೆ. ಗಾಯಗಳಿಂದ ರಕ್ತಸ್ರಾವ ಆಗುತ್ತಿದ್ದರೂ ಗ್ರಾಮಕ್ಕೆ ನಡೆದುಕೊಂಡು ಬಂದಿದ್ದಾನೆ.
ಗ್ರಾಮಸ್ಥರೆಲ್ಲ ಸೇರಿಕೊಂಡು ಕೂಡಲೇ ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ವಾಟ್ಸಾಪ್ : 7483892205
ಇಮೇಲ್: dvgsuddi@gmail.com