ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಆರ್ಚರಿ ಅಕಾಡೆಮಿ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಉಚಿತ ಅರ್ಚರಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಹಾನಗರ ಪಾಲಿಕೆ ಮಾಜಿ ಸದಸ್ಯ ದಿನೇಶ್.ಕೆ.ಶೆಟ್ಟಿ ಬಿಲ್ಲು ಬಿಡುವ ಮೂಲಕ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪ್ರಾರಂಭವಾಗುತ್ತಿರುವ ಉಚಿತ ಅರ್ಚರಿ ತರಬೇತಿಯ ಸದುಪಯೋಗ ಪಡೆಯಬೇಕು ಎಂದು ಕ್ರೀಡಾಪಟುಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕರಿಯಪ್ಪ, ಕಾರ್ಯದರ್ಶಿ ಹುಚ್ಚವನಹಳ್ಳಿ ಮಂಜುನಾಥ್, ಪಾಲಿಕೆ ವಿರೋಧಪಕ್ಷದ ನಾಯಕ ಎ. ನಾಗರಾಜ್, ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಗಡಿ ಗುಡಾಳ್ ಮಂಜುನಾಥ್, ನವ ನಿರ್ಮಾಣ ವೇದಿಕೆ ಜಿಲ್ಲಾಧ್ಯಕ್ಷ ಕೆ. ಏನ್. ವೆಂಕಟೇಶ್, ತರಬೇತುದಾರ ರಘು.ವಿ, ಕ್ರೀಡಾಪಟು ರೇವತಿ ನಾಯ್ಕ,ಕೆ.ಎಲ್. ಹರೀಶ್ ಬಸಾಪುರ ಉಪಸ್ಥಿತರಿದ್ದರು. ಉಚಿತ ತರಬೇತಿಗಾಗಿ ಮೊಬೈಲ್ ನಂಬರ್ 9448233464 ಸಂಪರ್ಕಿಸಿ.



