ಡಿವಿಜಿ ಸುದ್ದಿ, ದಾವಣಗೆರೆ: ನಗರದ ಹೊರವಲಯದಲ್ಲಿರುವ ತೋಳಹುಣಸೆಯ ಶಿವಗಂಗೋತ್ರಿಯಲ್ಲಿರುವ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿಯುತ ಶಾಲೆಯಲ್ಲಿ ವರ್ಣರಂಜಿತವಾಗಿ ವಾರ್ಷಿಕೋತ್ಸವ ಆಚರಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶ್ರೀ ರಾಮಾಯಣ ಗೀತ ನಾಟಕದಲ್ಲಿನ ಶ್ರೀ ರಾಮನ ಜನ್ಮದಿಂದ ರಾವಣನ ವಧೆಯವರಿನ ಪ್ರಸಂಗವನ್ನು ಮನೋಜ್ಞಾವಾಗಿ ಅನಾವರಣಗೊಳಿಸಿದರು. ವಿದ್ಯಾರ್ಥಿಗಳ ಅಭಿನಯವನ್ನು ಪೋಷಕರು ಭಕ್ತಿಭಾವದಿಂದ ಆಸ್ವಾದಿಸಿದರು. ಇದಲ್ಲದೆ ಬಾಲ ಕಾರ್ಮಿಕ ಪದ್ಧತಿ, ಸ್ರೀ ಶೋಷಣೆ, ಪ್ಲಾಸ್ಟಿಕ್ ನಿಷೇಧ ಮುಂತಾದ ಸಮಾಜಿಕ ಜಾಗೃತಿಗಳ ನೃತ್ಯ ರೂಪಕಗಳು ಸಹೃದಯರಲ್ಲಿ ಜಾಗೃತಿ ಮೂಡಿಸಿತು.

ಶ್ರೀ ರಾಮಾಯಣ ಗೀತ ನಾಟಕದ ನಿರ್ದೇಶನವನ್ನು ಶಾಲೆಯ ಶಿಕ್ಷಕರಾದ ಸಮೀರ್ ಬಿಸ್ವಾಸ್, ವಿಜಯ್ ಮತ್ತು ವೀರೇಂದ್ರ ಜೈನ್ ಅವರು ವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಅಧ್ಯಕ್ಷ ಎಸ್.ಎಸ್. ಗಣೇಶ್ ಅವರು, ಪ್ರತಿಭಾನ್ವಿತ ಮಕ್ಕಳಿಗೆ ಪ್ರಶಸ್ತಿ ವಿತರಿಸಿದರು. ಶಾಲೆಯಲ್ಲಿ ಮಕ್ಕಳ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡುಸುವುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಬೋಧನಾ ಉಪಕರಣಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ವಿದ್ಯಾರ್ಥಿಗಳ ದೈಹಿಕ ಕ್ಷಮತೆ ಹೆಚ್ಚಿಸಲು ಪೌಷ್ಠಿಕ ಆಹಾರವನ್ನು ಮಕ್ಕಳಿಗೆ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಶಾಲೆಯ ನಿರ್ದೇಶಕ ಕೆ.ಇಮಾಮ್ ಮಾತನಾಡಿ, ಸಂಸ್ಥೆಯು ಒದಗಿಸಿರುವ ಸೌಲಭ್ಯಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಕಾಲೇಜಿನ ಮುಖ್ಯಸ್ಥ ಮಂಜುನಾಥ್ ರಂಗರಾಜು ವಾರ್ಷಿಕ ವರದಿ ಮಂಡಿಸಿದರು. ಪ್ರಾಂಶುಪಾಲರಾದ ಜೆ.ಎಸ್ ವನಿತಾ ಕಾರ್ಯಕ್ರಮದ ವಂದರ್ಪಣೆ ನೆರವೇರಿಸಿದರು.
ವಿದ್ಯಾರ್ಥಿನಿಯರಾದ ಅಮೂಲ್ಯ.ಬಿ.ಎಮ್. ಮತ್ತು ಸ್ಪೂರ್ತಿ.ಬಿಎಸ್.ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು ಪೋಷಕರು-ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



