ಡಿವಿಜಿ ಸುದ್ದಿ, ದಾವಣಗೆರೆ: ಪುಣ್ಯಕೋಟಿ ಸೇವಾ ಟ್ರಸ್ಟ್ ವತಿಯಿಂದ ನಗರ ಗೋವು ಶಾಲೆಯ ಹಸುಗಳಿಗೆ ಮೇವು ಹಾಗು ಶ್ವಾನಗಳಿಗೆ ಆಹಾರ ನೀಡಲಾಯಿತು.
ಹಸಿವು ಅನ್ನೋದು ನಮ್ಮೆಲ್ಲರ ದೊಡ್ಡ ಶತ್ರು. ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ರಾಣಿಗಳಿಗೆ ಆಗುವ ನೋವನ್ನು ಯಾರ ಬಳಿಯೂ ಹೇಳಿಕೊಳ್ಳಲು ಆಗುವುದಿಲ್ಲ. ಅವುಗಳಿಗೆ ಹಸಿವಾದರೂ ಸಹ ಹೇಳಿಕೊಳ್ಳಲು ಆಗುವುದಿಲ್ಲ. ಇದನ್ನು ಮನಗೊಂಡ ಲಾಕ್ ಡೌನ್ ಸಂದರ್ಭದಲ್ಲಿ ಹಸುಗಳಿಗೆ ಮತ್ತು ಶ್ವಾನಗಳಿಗೆ ಆಹಾರ ವಿತರಿಸಿದ್ದೇವೆ ಎಂದು ಪಾಲಿಕೆ ಸದಸ್ಯ ಶಿವನಗೌಡ ಪಾಟೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ಕೋಶಾಧ್ಯಕ್ಷ ಶ್ರೀಕಾಂತ್ ನೀಲಗುಂದ, ಕಾರ್ಯದರ್ಶಿ ಅಭಿಷೇಕ್ ಎಳೆಹೊಳೆ ನಾಗರಾಜ್ ಬೆಳವನೂರು , ಮಹಾಂತೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.