ಡಿವಿಜಿ ಸುದ್ದಿ, ದಾವಣಗೆರೆ: ಮಹಾರಾಷ್ಟ್ರದ ಸೊಲ್ಲಾಪುರ ನಿವಾಸಿಯಾದ ಅವಿನಾಶ್ ಬೋಸಿಕರ್ ಎಂಬುವರು ಸಾಮಾಜಿಕ ಜಾಲ ತಾಣದಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ, ಬಾಳೆ ಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ವಿರುದ್ಧ ಹಾಗೂ ವೀರಶೈವ ಲಿಂಗಾಯತರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೋ ಹರಿದಾಡುತ್ತಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ದೇವರಮನೆ ಶಿವಕುಮಾರ್ ದೂರು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರೇ ಶಿವಪ್ಪಲ್ಲರ ಸಿದ್ದೇಶ್, ನಗರಧ್ಯಕ್ಷ ಜಿ.ಶಿವಯೋಗಿಪ್ಪ ಸಮಾಜದ ಮುಖಂಡರುಗಳಾದ ಪ್ರಕಾಶ್ ಪಾಟೀಲ್, ಜ್ಯೋತಿ ಜಂಬಗಿ, ಶಿವನಗೌಡ ಟಿ.ಪಾಟೀಲ್, ಅಶೋಕ ಕುಮಾರ್ ಪಲ್ಲೇದ, ದೇವೇಂದ್ರಪ್ಪ ಎಲ್.ಎಸ್, ಶ್ರೀಕಾಂತ್ ನಿಲಗುಂದ, ಅಭಿಷೇಕ ಪಿ, ನಿತೀಶ್ ನಾಗೂರು ಮತ್ತಿತರರು ಉಪಸ್ಥಿತರಿದ್ದರು.



