ಡಿವಿಜಿ ಸುದ್ದಿ, ದಾವಣಗೆರೆ : ಬ್ಯಾಂಕಿಗೆ ಹಣ ಕಟ್ಟಲು ಬಂದು, ಆಟೋದಲ್ಲಿ ಬ್ಯಾಗ್ ಬಿಟ್ಟು ಹೋದ ಪರಿಣಾಮ 39 ಲಕ್ಷ ರೂಪಾಯಿಗಳನ್ನು ವೃದ್ಧ ದಂಪತಿಗಳಯ ಕಳೆದುಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಮಾಣಿಕ್ಯಾ ವಾಸಗರ್(70) ತಿಲಕವತಿ(68) ಹಣ ಕಳೆದುಕೊಂಡ ದಂಪತಿಗಳು. ದಾವಣಗೆರೆ ನಗರದ ಕೆಆರ್ ಮಾರ್ಕೆಟ್ ಬಳಿಯ ವೈಶ್ಯಾ ಬ್ಯಾಂಕ್ ಬಳಿ ಘಟನೆ ನಡೆದಿದ್ದು, ಬ್ಯಾಂಕಿಗೆ ದುಡ್ಡು ಕಟ್ಟಲು ಹೋಗಿದ್ದ ದಂಪತಿಗಳು ಹೋಗಿದ್ದರು.ಬ್ಯಾಂಕ್ ಬಳಿ ಆಟೋದಿಂದ ಇಳಿಯುವಾಗ ಹಣವನ್ನು ಆಟೋದಲ್ಲಿಯೇ ಬಿಟ್ಟು ಬ್ಯಾಂಕಿನ ಒಳಗೆ ಹೋಗಿದ್ದಾರೆ.ವಾಪಸ್ಸು ಬಂದು ನೋಡುವಷ್ಟರಲ್ಲಿ ಆಟೋ ನಾಪತ್ತೆಯಾಗಿದೆ.
ಜಮೀನು ಮಾರಾಟ ಮಾಡಿದ ಹಣ ಬ್ಯಾಂಕಿಗೆ ತುಂಬಲು ಬಂದಿದ್ದ ದಂಪತಿಗಳು.ದಾವಣಗೆರೆ ನಗರದ ಬೇತೂರ ರಸ್ತೆಯ ಮನೆಯಿಂದ ಕೆಆರ್ ಮಾರ್ಕೆಟ್ ಬ್ಯಾಂಕಿಗೆ ಆಟೋದಲ್ಲಿ ಬಂದಿದ್ದರು.ದಾವಣಗೆರೆ ನಗರದ ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಡಿವಿಜಿ ಸುದ್ದಿ, ವಾಟ್ಸ್ ಆಪ್ : 7483892205