ಡಿವಿಜಿ ಸುದ್ದಿ, ದಾವಣಗೆರೆ : ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯಾಪ್ತಿಯಲ್ಲಿನ ಹಾಲು ಉತ್ಪಾದಕರ ಸಂಘಗಳಿಂದ ಖರೀದಿಸುವ ಹಾಲಿನ ದರವನ್ನು ಫೆ.6 ರಿಂದ ಪ್ರತಿ ಲೀಟರ್‍ಗೆ 1 ರೂಪಾಯಂತೆ ಹೆಚ್ಚಿಸಲಾಗಿದೆ.
ಇಂದು ನಡೆದ ಆಡಳಿತ ಮಂಡಳಿಯು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ. ಒಕ್ಕೂಟದಿಂದ ಸಂಘಗಳಿಗೆ 4.1% ರಿಂದ 8.50% ಡಿಗ್ರಿ ಬರುವ ಪ್ರತಿ ಲೀಟರ್ ಹಾಲಿಗೆ ರೂ.33.08, ಸಂಘದಿಂದ ಉತ್ಪಾದಕರಿಗೆ 4.1% ಡಿಗ್ರಿ ಇರುವ ಪ್ರತಿ ಲೀ. ಹಾಲಿಗೆ ರೂ.31.26 ರಂತೆ ದರ ನಿಗದಿಪಡಿಸಲಾಗಿದೆ.
ಹೈನುಗಾರಿಕೆಯನ್ನು ಉತ್ತೇಜಿಸಲು ಕರ್ನಾಟಕ ರಾಜ್ಯದಲ್ಲಿಯೇ ಒಕ್ಕೂಟವು ಉತ್ಪಾದಕರಿಕೆ ಗರಿಷ್ಟ ದರವನ್ನು ನೀಡುತ್ತಲಿದೆ. ಒಕ್ಕೂಟದದಲ್ಲಿ ಪ್ರತಿ ದಿನ ಸರಾಸರಿ 4.80 ಲಕ್ಷ ಲೀಟರ್ ಹಾಲು ಶೇಖರಣೆ ಯಾಗುತ್ತಿದೆ. ಪ್ರತಿದಿನ ಸ್ಥಳೀಯ ಹಾಲು/ ಮೊಸರು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಅಂದಾಜು 2.50 ಲಕ್ಷ ಲೀಟರ್ ಬಳಕೆಯಾಗುತ್ತಿದ್ದು, ಉಳಿದ ಹಾಲನ್ನು ಕೇರಳ ರಾಜ್ಯಕ್ಕೆ ಮಾರಾಟ ಮಾಡಲಾಗುತ್ತಿದೆ. ಜೊತೆ ಸರ್ಕಾರದ ಕ್ಷೀರಭಾಗ್ಯ ಯೋಜನೆಯ ಉಪಯೋಗಕ್ಕೆ ಹಾಲಿನ ಪುಡಿಯನ್ನು ತಯಾರಿಸಲು ಬಳಸಲಾಗುತ್ತಿದೆ ಎಂದು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.



