ಡಿವಿಜಿ ಸುದ್ದಿ, ದಾವಣಗೆರೆ: ಲಾಕ್ ಡೌನ್ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮತ್ತು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ನೇತೃತ್ವದಲ್ಲಿ ನಗರದಲ್ಲಿ ಸಿಟಿ ರೌಂಡ್ಸ್ ಹಾಕಲಾಯಿತು. ಈ ವೇಳೆ ಅನವಶ್ಯಕವಾಗಿ ವಾಹನದಲ್ಲಿ ಓಡಾಡುತ್ತಿದ್ದರ ವಾಹನ ಸೀಜ್ ಮಾಡಿ, ವಾಹನ ಸವಾರರನ್ನು ಬಂಧಿಸಲಾಯಿತು.
ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆ ಮೇ. 3 ವರಗೆ ಎರಡನೇ ಹಂತದ ಲಾಕ್ ಡೌನ್ ವಿಸ್ತರಿಸಲಾಗಿದೆ. ಲಾಕ್ ಡೌನ್ ಇದ್ದರೂ, ಅನವಶ್ಯಕವಾಗಿ ಪಾಸ್ ಇಲ್ಲದೆ ಓಡಾಡುವವರನ್ನು ಬಂಧಿಸಲಾಗುತ್ತಿದೆ.
ನಗರದ ಬಿಪಿ ರಸ್ತೆ, ಹೈಸ್ಕೂಲ್ ಮೈದಾನ, ಅರುಣ ಚಿತ್ರಮಂದಿರ, ಹರಿಹರ ರಸ್ತೆ, ಹದಡಿ ರಸ್ತೆ ಸೇರಿದಂತೆ ಅನೇಕ ಕಡೆ ವಾಹನ ಸೀಜ್ ಮಾಡಲಾಯಿತು. 25 ಕ್ಕೂ ಹೆಚ್ಚು ವಾಹನಗಳಲ್ಲಿ ಅಧಿಕಾರಿಗಳು ರೌಂಡ್ಸ್ ಹಾಕುತ್ತಿದ್ದಾರೆ.