ಡಿವಿಜಿ ಸುದ್ದಿ, ದಾವಣಗೆರೆ: ರಾಜ್ಯ ಸರ್ಕಾರ ಆಟೋ ಚಾಲಕರು, ಟ್ಯಾಕ್ಸಿ ಚಾಲಕರಿಗೆ ಲಾಕ್ ಡೌನ್ ಪರಿಹಾರವಾಗಿ 5 ಸಾವಿರ ಘೋಷಣೆ ಮಾಡಿದಂತೆ ತೀವ್ರ ಸಂಕಷ್ಟದಲ್ಲಿರುವ ಖಾಸಗಿ ಬಸ್ ಚಾಲಕ, , ನಿರ್ವಾಹಕರಿಗೂ 5 ಸಾವಿರ ರೂಪಾಯಿ ಪರಿಹಾರ ನೀಡುವಂತೆ ದಾವಣಗೆರೆ ಖಾಸಗಿ ಬಸ್ ಮಾಲೀಕ ಸಂಘದ ಅಧ್ಯಕ್ಷ ಮಂಜುನಾಥ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಲಾಕ್ ಡೌನ್ ನಂತರ ಖಾಸಗಿ ಬಸ್ ಓಡಾಡಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಬಸ್ ಗಳಲ್ಲಿ ಮಕ್ಕಳು ಮತ್ತು ವೃದ್ಧನರನ್ನು ಹತ್ತಿಸಿಕೊಳ್ಳುವಂತಿಲ್ಲ ಆದೇಶ ಮಾಡಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು, ವೃದ್ಧನರನ್ನು ಹತ್ತಿಸಿಕೊಳ್ಳದಿದ್ದರೆ, ಬಸ್ ಮುಂದಕ್ಕೆ ಓಡಿಸುವುದು ಕಷ್ಟವಾಗುತ್ತದೆ. ಹೀಗಾಗಿ ಈ ಆದೇಶವನ್ನು ವಾಪಸ್ಸು ಪಡೆಯಬೇಕು. ಇದಕ್ಕೆ ಬೇರೆ ಮಾರ್ಗ ಸೂಚಿ ನೀಡಬೇಕು. ರಾಜ್ಯದಾದ್ಯಂತ ಖಾಸಗಿ ಬಸ್ ಚಾಲಕರು ಮತ್ತು ನಿರ್ವಾಹಕರು ತುಂಬಾ ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಸರ್ಕಾರ ಕೂಡಲೇ ಬರಬೇಕಿದೆ ಒತ್ತಾಯಿಸಿದರು.
ಈಗಾಗಲೇ ರಾಜ್ಯ ಸರ್ಕಾರ ಆಟೋ, ಕ್ಯಾಬ್ ಟ್ರೈವರ್ ಗಳಿಗೆ 5 ಸಾವಿರ ಘೋಷಣೆ ಮಾಡಿದೆ. ಅದೇ ರೀತಿ ಖಾಸಗಿ ಬಸ್ ಚಾಲಕ, ನಿರ್ವಾಹಕರಿಗೆ ತಲಾ 5 ಸಾವಿರದಂತೆ 10 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಬೇಕು. ಲಾಕ್ ಡವನ್ ನಿಂದ ಖಾಸಗಿ ಬಸ್ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಸ್ ನಲ್ಲಿ ಕೇವಲ 24 ಸೀಟು ಹಾಕಿಕೊಂಡು ಹೋಗಬೇಕು ಎಂಬ ಆದೇಶಕ್ಕೆ ಸಡಿಲಿಕೆ ನೀಡಬೇಕು.ಇನ್ನು 3 ತಿಂಗಳ ಕಾಲ ಬಸ್ ಗಳ ಮೇಲಿನ ಸಾಲದ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಬೇಕು. ಇದಲ್ಲದೆ 6 ತಿಂಗಳ ಕಾಲ ರಸ್ತೆ ತೆರಿಗೆ ಮನ್ನಾ ಮಾಡಬೇಕು ಎಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದೇವೆ ಎಂದರು.
ಮುಖ್ಯಮಂತ್ರಿ ಯಾವ ತೀರ್ಮಾನ ತಗೆದುಕೊಳ್ಳುತ್ತಾರೋ ನೋಡಿಕೊಂಡು ಮುಂದಿನ ಜೂನ್ 2 ರಂದು ತುಮಕೂರಿನಲ್ಲಿ ಎಲ್ಲ ಜಿಲ್ಲಾ ಖಾಸಗಿ ಬಸ್ ಮಾಲೀಕ ಸಂಘದ ಸಭೆಯಲ್ಲಿ ಕರೆಲಾಗಿದೆ. ಆ ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ತಗೆದುಕೊಳ್ಳುತ್ತೇವೆ ಎಂದರು. ಈ ಸಂದರ್ಭದಲ್ಲಿ ಗೌರ ಅಧ್ಯಕ್ಷ ಕೆ.ಎಸ್ .ಮಲ್ಲೇಶ್, ಕಾರ್ಯದರ್ಶಿ ಎಂ.ಆರ್. ಸತೀಶ್ ಇದ್ದರು.



