ಡಿವಿಜಿಸುದ್ದಿ.ಕಾಂ, ದಾವಣಗೆರೆ: ಮಹಾನಗರ ಪಾಲಿಕೆ ವತಿಯಿಂದ ನಿವೇಶನ ರಹಿತರಿಗೆ, ನಿವೇಶನ ನೀಡುವುದರ ಕುರಿತು ಯಾವುದೇ ನಿಗಧಿತ ಅರ್ಜಿಗಳನ್ನು ವಿತರಿಸುತ್ತಿಲ್ಲ ಹಾಗೂ ಸ್ವೀಕರಿಸುತ್ತಿಲ್ಲ. ನಿವೇಶನ ರಹಿತರು ಅರ್ಜಿಯನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅವಾಜ್ ಯೋಜನೆ ಮೂಲಕ ಆನ್‍ಲೈನ್ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಪಾಲಿಕೆ ವ್ಯಾಪ್ತಿಯ ಕೆಲವು ವಾರ್ಡ್‍ಗಳಲ್ಲಿ ಆಶ್ರಯ ಯೋಜನೆಯ ಅರ್ಜಿ ನೀಡುತ್ತಿರುವ ಕುರಿತು ದೂರುಗಳು ಬಂದಿದ್ದು, ಸಾರ್ವಜನಿಕರು ಇದಕ್ಕೆ ಕಿವಿಗೊಡಬಾರದು ಮತ್ತು ಅಂತಹ ಯಾವುದೇ ಮಾಹಿತಿ ಇದ್ದರೆ ಪಾಲಿಕೆಗೆ ನೀಡಬಹುದು ಎಂದರು.
ಆಶ್ರಯ ಸಮಿತಿಯಲ್ಲಿ ಮನೆ, ನಿವೇಶನ ಮಂಜೂರಿಗೆ ಪರಿಗಣಿಸುವಾಗ ಆನ್‍ಲೈನ್ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದೆಂದು ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.