ದಾವಣಗೆರೆ : ಮಹಾನಗರ ಪಾಲಿಕೆಯಿಂದ ಒಂದು ಲಕ್ಷ ಸಸಿ ನೆಡುವ ಯೋಜನೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ಡಿವಿಜಿ ಸುದ್ದಿ, ದಾವಣಗೆರೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೇವಲ ಗಿಡ ನೆಡುವುದು ಮುಖ್ಯವಲ್ಲ.ನೆಟ್ಟ ಗಿಡಗಳನ್ನು ಪೋಷಣೆ ಮಾಡುವುದು ಮುಖ್ಯವಾಗಿದೆ. ಪ್ರತಿಯೊಬ್ಬರು ಸಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಕರೆ ನೀಡಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಹಾನಗರ ಪಾಲಿಕೆ ವತಿಯಿಂದ ವಿದ್ಯಾನಗರ ವಿನಾಯಕ ಬಡಾವಣೆಯ ಸೌಜನ್ಯ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾವೆಲ್ಲರೂ ಜೀವಿಸಲು ಹಾಗೂ ಉಸಿರಾಡಲು ಪರಿಸರ ಮುಖ್ಯ. ಪರಿಸರ ಇದ್ದಷ್ಟು ಆರೋಗ್ಯ ಹೆಚ್ಚಾಗುತ್ತದೆ. ಒಂದು ವೇಳೆ ಪರಿಸರ ಕ್ಷೀಣಿಸಿದರೆ ಭೂಮಿ ಮೇಲಿನ ಜೀವಿಗಳು ನಾಶ ಹೊಂದುತ್ತವೆ. ಜೊತೆಗೆ ಉಸಿರಾಟದ ತೊಂದರೆ ಉಂಟಾಗುತ್ತದೆ ಎಂದರು.

IMG 20200605 WA0003

ವಾಹನಗಳ ಹೊಗೆಯಿಂದ ಹಾಗೂ ಬೇರೆ ಬೇರೆ ಮಾಲಿನ್ಯದಿಂದ ಇಂದು ಪರಿಸರದ ವಾತಾವವರಣ ಹದಗೆಡುತ್ತಿದೆ. ಲಾಕ್ಡೌನ್ ವೇಳೆಯಲ್ಲಿ ಪರಿಸರದ ವಾತಾವರಣ ಸುಧಾರಿಸಿದೆ. ಈ ಮೂಲಕ ಜನರ ಒತ್ತಡ ಹಾಗೂ ವಾಹನಗಳ ಓಡಾಟದಿಂದ ಪರಿಸರದ ವಾತಾವರಣದಲ್ಲಿ ವ್ಯತ್ಯಾಸವಾಗುವುದು ಕಂಡುಬಂದಿದೆ ಎಂದರು.

ಈ ಬಾರಿ ಪಾಲಿಕೆಯೂ ಒಂದು ಲಕ್ಷ ಗಿಡ ನೆಡುವ ಶಪಥ ಮಾಡಿದೆ. ನಗರದ ಎಲ್ಲಾ ವಾರ್ಡ್ ಹಾಗೂ ರಸ್ತೆ ಬದಿಗಳಲ್ಲಿ ಗಿಡ ಬೆಳೆಸುವ ತೀರ್ಮಾನ ಕೈಗೊಂಡಿದೆ. ಇದು ಸ್ವಾಗತರ್ಹ ತೀರ್ಮಾನವಾಗಿದ್ದು, ಒಂದು ಲಕ್ಷ ಗಿಡ ನೆಡುವ ಕೆಲಸ ಸಣ್ಣ ವಿಷಯವಲ್ಲ. ನೆಟ್ಟಂತಹ ಗಿಡಗಳನ್ನು ಜವಾಬ್ದಾರಿ ತೆಗೆದುಕೊಂಡು ಬೆಳೆಸಬೇಕು ಎಂದರು.

IMG 20200605 WA0004

ಗಿಡ ನೆಟ್ಟ ಬಳಿಕ ವಾರ್ಡ್ನ ಕಾರ್ಪೊರೇಟರ್ ಮತ್ತು ನಾಗರಿಕರು ಗಿಡಗಳ ಬಗ್ಗೆ ಕಾಳಜಿ ವಹಿಸಬೇಕು. ಆಗ ಈ ಕಾರ್ಯಕ್ರಮಕ್ಕೆ ಒಂದು ನಿಜವಾದ ಅರ್ಥ ಬರುತ್ತದೆ ಎಂದು ತಿಳಿಸಿದರು.

ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಪರಿಸರದ ಉಳಿವಿಗೆ ಗಿಡಗಳನ್ನು ಸಂರಕ್ಷಣೆ ಮಾಡುವುದು ಮುಖ್ಯವಾಗಿದೆ. ಮಾಹಾನಗರಪಾಲಿಕೆ ವತಿಯಿಂದ ನೆಡಲಾಗುತ್ತಿರುವ 1 ಲಕ್ಷ ಗಿಡಗಳಲ್ಲಿ 50 ಸಾವಿರ ಗಿಡಗಳಾದರೂ ಉಳಿಯುವಂತೆ ನಾವು ನೋಡಿಕೊಳ್ಳಬೇಕು. ವಾರಕ್ಕೆ ಒಂದು ಬಾರಿಯಾದರೂ ನೆಟ್ಟಿರುವಂತಹ ಗಿಡಗಳ ಬಗ್ಗೆ ಕಾಳಜಿ ವಹಿಸಬೇಕು. ಎಂದು ಸಲಹೆ ನೀಡಿದರು.

ಮಲೆನಾಡಿನ ಭಾಗಗಳಲ್ಲಿ ಗಿಡ ಮರಗಳನ್ನು ಕಡಿಯುತ್ತಿರುವುದರಿಂದ ಮೊದಲಿನಂತೆ ಮಳೆಯಾಗುತ್ತಿಲ್ಲ. ಆ ರೀತಿಯಾಗಬಾರದು. ನಾವೆಲ್ಲರೂ ಅತೀ ಹೆಚ್ಚು ಗಿಡ ಮರ ಬೆಳೆಸುವ ಮೂಲಕ ಜಿಲ್ಲೆಯನ್ನು ಮಲೆನಾಡು ಪ್ರದೇಶವಾಗಿಸಬೇಕು. ಇದಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದ್ದು, ಪ್ರತಿಯೊಬ್ಬ ನಾಗರಿಕರು ಕೈ ಜೋಡಿಸಬೇಕು ಎಂದರು.

ಮಹಾನಗರಪಾಲಿಕೆ ಮಹಾಪೌರರಾದ ಬಿ.ಜೆ.ಅಜಯ್ ಕುಮಾರ್ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಾವು ಒಂದು ವರ್ಷದ ಅವಧಿಯೊಳಗೆ ಒಂದು ಲಕ್ಷ ಗಿಡ ನೆಡುವ ಯೋಜನೆ ಹಮ್ಮಿಕೊಂಡಿದ್ದೇವೆ. ಕೇವಲ ಸಸಿ ನೆಡುವ ಕೆಲಸವಷ್ಟೇ ಅಲ್ಲ, ವಾರಕೊಮ್ಮೆ ಗಿಡಗಳ ಪರಿಶೀಲನೆ ನಡೆಸವುದು ಸಹ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಗಿಡ ನೆಡುವುದು ಕೇವಲ ಕಾರ್ಯಕ್ರಮಕ್ಕೆ ಹಾಗೂ ಫೋಟೊ ತೆಗಿಸಿಕೊಳ್ಳುವುದಕ್ಕೆ ಮಾತ್ರ ಸಿಮೀತವಾಗಬಾರದು. ನಾವೇಲ್ಲರೂ ಬದುಕಿ ಆರೋಗ್ಯವಾಗಿರಲು ಒಂದು ಲಕ್ಷ ಗಿಡಗಳಲ್ಲಿ ಒಂದು ಗಿಡ ಸಹ ಹಾಳಾಗದಂತೆ ನೋಡಿಕೊಳ್ಳಬೇಕು. ಮಕ್ಕಳಂತೆ ಗಿಡಗಳನ್ನು ಪಾಲನೆ ಮಾಡಬೇಕು ಎಂದರು.

ಮಾಜಿ ದಾವಣಗೆರೆ ಶಾಸಕರಾದ ಪಂಪಾಪತಿಯವರ ಅವಧಿಯಲಿ ನಗರದಲ್ಲಿ 30 ಸಾವಿರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಂದು ಆ ಗಿಡಗಳು ಹೆಮ್ಮರವಾಗಿವೆ. ಅದನ್ನು ಜನರು ಸ್ಮರಿಸುತ್ತಿದ್ದಾರೆ. ಈ ಮೂಲಕ ನಮಗೂ ಸಹ ಅವರ ಕಾರ್ಯ ಇಂದು ಸ್ಫೂರ್ತಿಯಾಗಿದೆ ಎಂದು ಪ್ರಶಂಸಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಉಪ ಮಹಾಪೌರರಾದ ಸೌಮ್ಯ ನರೇಂದ್ರ ಕುಮಾರ್, ಆಯುಕ್ತ ವಿಶ್ವನಾಥ್ ಮುದಜ್ಜಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಯಮ್ಮ ಗೋಪಿನಾಯ್ಕ್, ಗೌರಮ್ಮ, ಪ್ರಸನ್ನ ಕುಮಾರ್, ಸದಸ್ಯರಾದ ವೀಣಾ ನಂಜಣ್ಣನವರ್, ವೀರೇಶ್, ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಮತ್ತು ಪಾಲಿಕೆಯ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *