ಡಿವಿಜಿ.ಸುದ್ದಿ.ಕಾಂ, ದಾವಣಗೆರೆ: ವಿಶ್ವ ಹಿಂದೂ ಪರಿಷತ್ ವತಿಯಿಂದ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಅಂಗವಾಗಿ ನಗರದ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಜಾಗರಣಾ ವೇದಿಕೆ ಆಯೋಜಿಸಿದ್ದ ಆಟೋ ಜಾಥಾವನ್ನು ಹಿರಿಯ ಮುಖಂಡ ಕೆ.ಬಿ.ಶಂಕರನಾರಾಯಣ ಚಾಲನೆ ನೀಡಿದರು.
ಮೆರವಣಿಗೆ ಮಹನಿಯರಾದ ಬಸವಣ್ಣ, ಅಂಬೇಡ್ಕರ್, ಕುವೆಂಪು, ಭಗತ್ ಸಿಂಗ್, ಕನಕದಾಸರು, ಸ್ವಾಮಿ ವಿವೇಕಾನಂದ, ಕಿತ್ತೂರು ರಾಣಿ ಚನ್ನಮ್ಮ, ಸುಭಾಷ್ ಚಂದ್ರ ಬೋಸ್, ಒನಕೆ ಒಬವ್ವ , ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕರ ಸಾಧಕರ ಭಾವಚಿತ್ರ ಪ್ರದರ್ಶಿಸಲಾಯಿತು.
ಹೈಸ್ಕೂಲ್ ಮೈದಾನದಿಂದ ಆರಂಭಗೊಂಡು ಪಿಬಿ ರಸ್ತೆ, ಅರುಣ ಟಾಕೀಸ್, ವಿನೋಬನಗರ, ವಾಟರ್ ಟ್ಯಾಂಕ್ ಪಾರ್ಕ್, ಗುಂಡಿ ಸರ್ಕಲ್, ವಿದ್ಯಾರ್ಥಿಭವನ, ಕೆಟಿಜೆ ನಗರ, ಭಗತ್ ಸಿಂಗ್ ನಗರ, ಪಿಬಿ ರಸ್ತೆ, ಲಾಯರ್ ರಸ್ತೆ, ಜಯದೇವವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನಹ ಹೈಸ್ಕೂಲ್ ಮೈದಾನಕ್ಕೆ ಬಂದು ತಲುಪಿತು. ಈ ಸಂದರ್ಭದಲ್ಲಿ ಸತೀಶ್ ಪೂಜಾರ್, ರಾಜನಹಳ್ಳಿ ಶಿವಕುಮಾರ್, ಅಜಯ್ ಕುಮಾರ್, ಎಸ್ ಟಿ ವಿರೇಶ್, ಪಿ.ಸಿ.ಶ್ರೀನಿವಾಸ್ ಸೇರಿದಂತೆ ಮತ್ತಿತರರಿದ್ದರು.