ಡಿವಿಜಿ ಸುದ್ದಿ, ದಾವಣಗೆರೆ: ನಗರದಲ್ಲಿ ನಿನ್ನೆ ಒಂದೇ ದಿನ ಮೂರು ಕಡೆ ಸರಣಿ ಸರಗಳ್ಳತನ ನಡೆದಿದೆ. ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಇಬ್ಬರು ಶಿಕ್ಷಕಿಯರು ಹಾಗೂ ಒಬ್ಬ ಗೃಹಿಣಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಶಿವಮೊಗ್ಗದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೌಲ್ಯಮಾಪನಕ್ಕೆ ಸಿದ್ದಗಂಗಾ ಶಾಲೆಗೆ ಹಿಂಭಾಗದ ರಸ್ತೆಯಲ್ಲಿ ಸ್ನೇಹಿತೆ ಜೊತೆ ತೆರಳುತ್ತಿದ್ದಾಗ ಪಲ್ಸರ್ ಬೈಕ್‌ನಲ್ಲಿ ಬಂದ ಯುವಕರಿಬ್ಬರು 5ಗ್ರಾಂ ತೂಕದ 15 ಸಾವಿರ ಮೌಲ್ಯದ ಸರ ಕಿತ್ತು ಪರಾರಿಯಾಗಿದ್ದಾರೆ. ಚನ್ನಗಿರಿ ತಾಲ್ಲೂಕು ಮಾವಿನ ಹೊಳೆ ಗ್ರಾಮದಲ್ಲಿ ಮಹಾರುದ್ರ ಸ್ವಾಮಿ ಪ್ರೌಢಶಾಲೆಯಿಂದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕಾಗಿ ದಾವಣಗೆರೆಗೆ ಬಂದಿದ್ದರು. ಕಳ್ಳರು ಕಮ್ಯಾಂಡೊ ಕ್ಯಾಪ್ ಹಾಗೂ ಮಾಸ್ಕ್ ಧರಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೆಟಿಜೆ ನಗರದ 17ನೇ ಕ್ರಾಸ್ ನಿವಾಸಿ ಗೀತಾ ಅವರು ಸಿದ್ದಗಂಗಾ ಶಾಲೆ ಹಿಂಭಾಗದ ರಸ್ತೆಯಲ್ಲಿ ಹೋಗುತ್ತಿರುವಾಗ ಬೈಕ್‌ನಲ್ಲಿ ಬಂದ ಇಬ್ಬರು ಸರ ಕಸಿದು ಪರಾರಿಯಾಗಿದ್ದಾರೆ. ಈ ಎರಡು ಪ್ರಕರಣಗಳು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಎಸ್.ಎಸ್.ಲೇ ಔಟ್ ‘ಎ‘ ಬ್ಲಾಕ್ ನ ಅಂಗವಿಕಲರ ಆಶಾಕಿರಣ ಟ್ರಸ್ಟ್ ಭಾವೈಕ್ಯತಾ ಶಾಲೆಯ ಶಿಕ್ಷಕಿ ಯಶೋಧಮ್ಮ ಅವರು ಎಸ್‌ಎಸ್ ಮಾಲ್‌ನಿಂದ ಶಾಲೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಕುತ್ತಿಗೆಯಲ್ಲಿದ್ದ 4 ಮತ್ತು 1 ತೊಲದ ಎರಡು ಬಂಗಾರದ ಸರಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



