ಡಿವಿಜಿ ಸುದ್ದಿ, ಬೆಂಗಳೂರು: ಲಾಕ್ ಡೌನ್ ಸಡಿಲಿಕೆ ಪರಿಣಾಮ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ವಾಪಸ್ಸಾಗಿರುವವರಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಅದರಲ್ಲೂ ಹಾಸನ ಹಾಗೂ ಮಂಡ್ಯ ಜಿಲ್ಲೆ ಮಹಾರಾಷ್ಟ್ರ ಕೊರೊನಾ ಸೋಂಕು ಮಹಾ ಸಂಕಷ್ಟ ತಂದಿದೆ. ಇದರ ಪರಿಣಾಮ ರಾಜ್ಯದಲ್ಲಿ ಇಂದು ಒಂದೇ ದಿನ 105 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,710ಕ್ಕೆ ಏರಿಕೆಯಾಗಿದೆ.
ಕೊರೊನಾದಿಂದ ರಾಜ್ಯದಲ್ಲಿ ಈವರೆಗೆ 41 ಜನ ಮೃತಪಟ್ಟಿದ್ದು, 588 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿಂದು ಯಾವುದೇ ಮೃತಪಟ್ಟ ಪ್ರಕರಣ ವರದಿಯಾಗಿಲ್ಲ.
ಕೋವಿಡ್19: ಮಧ್ಯಾಹ್ನದ ವರದಿ 22/05/2020#KarnatakaFightsCorona #IndiaFightsCoronavirus pic.twitter.com/z4bJiJCjt4
— B Sriramulu (@sriramulubjp) May 22, 2020
ರಾಜ್ಯದಲ್ಲಿ ಇಂದು 17 ಜನ ಡಿಚ್ಚಾರ್ಜ್ ಆಗಿದ್ದಾರೆ. ಬಾಗಲಕೋಟೆ 02, ಬೆಳಗಾವಿ 01, ದಕ್ಷಿಣ ಕನ್ನಡದಲ್ಲಿ 01, ವಿಜಯಪುರದಲ್ಲಿ 04, ಮಂಡ್ಯದಲ್ಲಿ 8, ಕಲಬುರಗಿಯಲ್ಲಿ 7, ಬೀದರ್‌ನಲ್ಲಿ 10, ಉತ್ತರ ಕನ್ನಡ 1, ಹಾಸನದಲ್ಲಿ 21, ದಕ್ಷಿಣ ಕನ್ನಡದಲ್ಲಿ 1, ಬೆಂಗಳೂರು ನಗರದಲ್ಲಿ 06, ಕಲಬುರಗಿಯಲ್ಲಿ ಮೂವರು ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇನ್ನು ಇಂದು ಪತ್ತೆಯಾದ ಸೋಂಕಿತರ ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 04, ಧಾರವಾಡದಲ್ಲಿ 02, ತುಮಕೂರಿನಲ್ಲಿ 08, ಚಿಕ್ಕಬಳ್ಳಾಪುರದಲ್ಲಿ 45, ಮಂಡ್ಯದಲ್ಲಿ 03, ಬಾಗಲಕೋಟೆಯಲ್ಲಿ 01, ಚಿಕ್ಕಮಗಳೂರಿನಲ್ಲಿ 05, ಚಿತ್ರದುರ್ಗ 01, ದಾವಣಗೆರೆ 03, ಬೆಂಗಳೂರು ನಗರ 05, ವಿಜಯಪುರ 02, ಬೀದರ್ 06, ಬೆಳಗಾವಿ 01, ಹಾವೇರಿ 03, ಉತ್ತರ ಕನ್ನಡ 01, ದಕ್ಷಿಣ ಕನ್ನಡ 01 ಮತ್ತು ಹಾಸನದಲ್ಲಿ 14 ಪ್ರಕರಣಗಳು ವರದಿಯಾಗಿವೆ.