ಡಿವಿಜಿ ಸುದ್ದಿ, ಹೊನ್ನಾಳಿ: ತಾಲ್ಲೂಕಿನ ಹತ್ತೂರು ಗ್ರಾಮದ ಕೊರೊನಾ ಪಾಸಿಟಿವ್ ಪತ್ತೆಯಾದ ವ್ಯಕ್ತಿ ತಾಲ್ಲೂಕ್ ಕಚೇರಿಗೆ ಭೇಟಿ ನೀಡಿದ್ದ. ಇದಲ್ಲ ಆತ ಓಡಾಡಿದ ಅಂಗಡಿ, ಹೋಟೆಲ್ ಸೇರಿದಂತೆ ಎಲ್ಲಾ ಕಡೆ ಸೀಲ್ ಡೌನ್ ಮಾಡಲಾಗಿದೆ.
ಸೋಂಕಿತ ವ್ಯಕ್ತಿ ತಾಲ್ಲೂಕು ಅಟಲ್ ಜೀ ಕೇಂದ್ರಕ್ಕೆ ಕಚೇರಿಗೆ ಅರ್ಜಿ ಸಲ್ಲಿಸಲು ಬಂದಿದ್ದ. ಕಚೇರಿ ಸುತ್ತಮುತ್ತಲಿನ ಕಂಪ್ಯೂಟರ್ ಕೇಂದ್ರ, ಬೇಕರಿ, ಹೋಟೆಲ್, ಮೆಡಿಕಲ್ ಶಾಪ್ ಗಳಿಗೆ ಭೇಟಿ ನೀಡಿದ್ದಾನೆ. ಹೀಗಾಗಿ ಆತ ಓಡಾಡಿದ ಎಲ್ಲಾ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕಿತ ವ್ಯಕ್ತಿಯಿಂದ ಅರ್ಜಿ ಸ್ವೀಕರಿಸಿದ ಕಂಪ್ಯೂಟರ್ ಅಪರೇಟರ್ ಹಾಗೂ ಕೇಸ್ ವರ್ಕ್ ಅವರನ್ನು ಕ್ವಾರಂಟೈನ್ ಒಳಪಡಿಸಲಾಗಿದೆ ಎಂದು ತಹಶಿಲ್ದಾರ್ ತುಷಾರ್ ಬಿ. ಹೊಸೂರು ತಿಳಿಸಿದರು.
ಇನ್ನು ಹೊನ್ನಾಳಿ ಪಟ್ಟಣದಲ್ಲಿ ಸಂತೆಗೆ ಅನುಮತಿ ಇಲ್ಲದಿದ್ದರೂ, ಸಂತೆ ನಡೆಯುತ್ತಿತ್ತು. ಇದೀಗ ಮುಂದಿನ ನಾಲ್ಕು ವಾರಗಳ ಕಾಲ ಸಂತೆಯನ್ನು ನಿಷೇಧಿಸಲಾಗಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್. ಆರ್. ವೀರಭದ್ರಯ್ಯ ಹೇಳಿದರು.



