ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿಇಂದು 122 ಕೊರೊನಾ ಪಾಸಿಟಿವ್ ಪ್ರಕಣಗಳು ಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಒಟ್ಟು 2,405 ಮಂದಿಗೆ ಸೋಂಕು ತಗುಲಿದ್ದು, 48 ಮಂದಿ ಮೃತಪಟ್ಟಿದ್ದಾರೆ. ಇವರೆಗೆ 762 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,596 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.
ಇಂದು ಪತ್ತೆಯಾದ 122 ಪ್ರಕಣಗಳಲ್ಲಿ ಬೆಂಗಳೂರು ನಗರದಲ್ಲಿ 6, ಬೆಂಗಳೂರು ಗ್ರಾಮಾಂತರ 2, ಕಲಬುರ್ಗಿ 28, ಯಾದಗಿರಿ 16, ಹಾಸನ 15, ಬೀದರ್ 12, ದಕ್ಷಿಣ ಕನ್ನಡ 11, ಉಡುಪಿ 9, ಉತ್ತರ ಕನ್ನಡ 6, ರಾಯಚೂರು 5, ಬೆಳಗಾವಿ 4, ಚಿಕ್ಕಮಗಳೂರು 3, ವಿಜಯಪುರ 2 ಮಂಡ್ಯ ಹಾಗೂ ತುಮಕೂರಿನಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.

ಇನ್ನು ಯಾದಗಿರಿ ಜಿಲ್ಲೆಯ ನಿವಾಸಿ 69 ವರ್ಷದ ವೃದ್ಧೆ ಕೊರೊನಾ ವೈರಸ್‍ನಿಂದ ಸಾವನ್ನಪ್ಪಿದ್ದಾರೆ. ವೃದ್ಧೆಯು ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ ಹೊಂದಿದ್ದರು. ಅವರು ಮೇ 20ರಂದು ಮೃತಪಟ್ಟಿದ್ದರು. ಬಳಿಕ ಅವರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿತ್ತು. ರಿಪೋರ್ಟ್ ಪಾಸಿಟಿವ್ ಬಂದಿದೆ.



