ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದದಲ್ಲಿ ಮಹಾರಾಷ್ಟ್ರ ಕೊರೊನಾ ಸೋಂಕು ಸ್ಫೋಟಗೊಂಡಿದೆ. ಇದರ ಪರಿಣಾಮ ರಾಜ್ಯದಲ್ಲಿ ಇಂದು ಒಂದೇ ದಿನ 138 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,743ಕ್ಕೆ ಏರಿಕೆಯಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಜೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಯಲ್ಲಿ 138 ಪ್ರಕರಣಗಳು ಪತ್ತೆಯಾಗಿವೆ. 41 ಪ್ರಕಣಗಳು ಮೃತಪಟ್ಟಿದ್ದು, 597 ಜನ ಆಸ್ಪತ್ರೆಯಿಂ ಡಿಸ್ಚಾರ್ಚ್ ಆಗಿದ್ದಾರೆ. 1, 104 ಜನರು ಸಕ್ರಿಯರಿದ್ದಾರೆ. ಇಂದು ವಿವಿಧ ಜಿಲ್ಲೆಯಲ್ಲಿ 26 ಜನ ಗುಣಮುಖರಾಗಿದ್ದಾರೆ.
ಚಿಕ್ಕಬಳ್ಳಾಪುರ 47, ಹಾಸನ 14, ತುಮಕೂರು 8, ಬೀದರ್ 9, ರಾಯಚೂರು 10, ಶಿವಮೊಗ್ಗ 2, ಬೆಂಗಳೂರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 5, ವಿಜಯಪುರ 6, ಬೆಂಗಳೂರು ಗ್ರಾಮಾಂತರ 4, ಮಂಡ್ಯ 8, ದಾವಣಗೆರೆ, ಹಾವೇರಿ, ಉಡುಪಿ ಜಿಲ್ಲೆಯಲ್ಲಿ ತಲಾ 3, ಧಾರವಾಡ 2, ಬಾಗಲಕೋಟೆ, ಚಿತ್ರದುರ್ಗ, ದಕ್ಷಿನ ಕನ್ನಡ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಒಂದು ಪಾಸಿಟಿವ್ ಪತ್ತೆಯಾಗಿದೆ.