ಡಿವಿಜಿ ಸುದ್ದಿ, ಹರಪನಹಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನಲೆ ತಾಲ್ಲೂಕಿನ ಉಚ್ಚoಗಿದುರ್ಗದ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ ಆದೇಶದಂತೆ ಕಾರ್ಯಪಡೆಯನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಕಾರ್ಯಪಡೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ,ಗ್ರಾಮ ಲೆಕ್ಕದಿಕಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷರೂ, ಉಪಾಧ್ಯಕ್ಷರೂ, ಒಬ್ಬರೂ ಸದಸ್ಯರು,ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ,ಪೊಲೀಸರಿದ್ದು, ಜನರಲ್ಲಿ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸಿದರು.
ಗ್ರಾಮಕ್ಕೆ ಬೇರೆ ರಾಜ್ಯಗಳು, ದೇಶ, ಜಿಲ್ಲೆಗಳಿಂದ ಬಂದವರ ಪಟ್ಟಿಯನ್ನು ಮಾಡಿ ಪ್ರತಿಯೊಬ್ಬರೂ ಆಸ್ಪತ್ರೆಯಲ್ಲಿ ಬಂದು ಪರೀಕ್ಷೆ ಮಾಡಿಸಿಕೊಳ್ಳಿ ಹಾಗೂ ಮನೆ ಬಿಟ್ಟು ಹೊರಗೆ ಹೋಗಬೇಡಿ ಎಂದಿ ತಿಳಿಸಿದರು.ಇದಲ್ಲದೆ ಮಸೀದಿಯಲ್ಲಿ ಯಾರೂ ಸಾಮೂಹಿಕ ನಮಾಜ್ ಮಾಡಬಾರದು ಎಂದು ತಿಳಿಸಿದರು.