ಡಿವಿಜಿ ಸುದ್ದಿ,ಶಿವಮೊಗ್ಗ: ಭದ್ರಾವತಿ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಗೌಡ (67) ಅವರು ಕೊರೊನಾದಿಂದ ನಿಧನ ಹೊಂದಿದ್ದಾರೆ.
ಮೂರು ದಿನಗಳ ಹಿಂದೆ ತೀವ್ರ ಉಸಿರಾಟದ ತೊಂದರೆಯಿಂದ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಸೋಂಕು ಇರುವುದು ಖಚಿತವಾದ ನಂತರ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ.
ಸೂಕ್ತ ಸಮಯದಲ್ಲಿ ಬೆಡ್ ಸಿಗಲಿಲ್ಲ ಎಂದು ಮೆಗ್ಗಾನ್ ಆಸ್ಪತ್ರೆ ಎದುರು ಅನುಯಾಯಿಗಳು ಆಕ್ರೋಶ ವ್ಯಕ್ತಪಡಿಸಿದರು. ವಿಐಎಸ್‌ಎಲ್ ನೌಕರರಾಗಿ ಜೀವನ ಆರಂಭಿಸಿದ್ದ ಅವರು ಕಾರ್ಮಿಕ ನಾಯಕರಾಗಿ ಬೆಳೆದು ನಂತರ ರಾಜಕೀಯವಾಗಿ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದರು.



