ಡಿವಿಜಿ ಸುದ್ದಿ, ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ ಜನರು ಸ್ವಯಂ ಪ್ರೇರಿತರಾಗಿ ಮಧ್ಯಾಹ್ನದ ನಂತರ ಲಾಕ್ ಡೌನ್ ಮಾಡಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಕೊರೊನಾ ತನ್ನ ಆರ್ಭಟ ಮುಂದುವರಿದಿದೆ. ಸೋಂಕಿನ ಸ್ಫೋಟಕ್ಕೆ ಭಯಗೊಂಡಿರುವ ಜನ ಸರ್ಕಾರದ ಆದೇಶಕ್ಕೆ ಕಾಯದೇ ತಾವೇ ಸ್ವಯಂ ಪ್ರೇರಿತರಾಗಿ ಲಾಕ್‍ಡೌನ್ ಹೇರಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಸಂಪರ್ಕದಿಂದಲೇ ಚಿತ್ರದುರ್ಗದಲ್ಲಿ ಸೋಂಕು ವ್ಯಾಪಕವಾಗಿ ಹಬ್ಬತ್ತಿದೆ. ಬೆಂಗಳೂರಿಗೆ ಹೋಗಿ ಬಂದಿದ್ದ ಹಿರಿಯೂರಿನ ವರ್ತಕನಿಂದ ವೇದಾವತಿ ನಗರ ಹಾಗೂ ಅಜಾದ್ ನಗರದಲ್ಲಿ ಸೋಂಕು ಹಬ್ಬಿದೆ. ಇದರಿಂದ ಹಿರಿಯೂರು ಪಟ್ಟಣದ ಜನರಲ್ಲಿ ಆತಂಕ ಹೆಚ್ಚಾಗಿದೆ.
ಹೀಗಾಗಿ ಇಲ್ಲಿನ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮಧ್ಯಾಹ್ನಕ್ಕೆ ಸ್ವಯಂ ಘೋಷಿತವಾಗಿ ಬಂದ್ ಮಾಡುವ ಮೂಲಕ ಕೊರೊನಾ ಹರಡದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.



