ನವದೆಹಲಿ: ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಗರಿಷ್ಠ ಮಟ್ಟ ತಲುಪುವ ಸಾಧ್ಯತೆಯಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಹೇಳಿದೆ.
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಂಶೋಧಕರ ತಂಡವನ್ನು ರಚಿಸಿತ್ತು. ಐಸಿಎಂಆರ್ ರಚನೆ ಮಾಡಿರುವ ‘ಆಪರೇಷನ್ಸ್ ರಿಸರ್ಚ್ ಗ್ರೂಪ್’ ನಡೆಸಿದ ಅಧ್ಯಯನ ನವೆಂಬರ್ ನಲ್ಲಿ ಸೋಂಕಿತ ಪ್ರಮಾಣ ಇನ್ನಷ್ಟು ಹೆಚ್ಚಲಿದೆ ಎಂದು ತಿಳಿಸಿದೆ.
ಸದ್ಯ ದೇಶದಾದ್ಯಂತ ಪ್ರತಿ ದಿನ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪ್ರತಿದಿನ ದಾಖಲಾಗುತ್ತಿದೆ.ಮುಂದೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಲಾಕ್‌ಡೌನ್ ಘೋಷಣೆಯಿಂದಾಗಿ ಸೋಂಕು ಹರಡುವ ವೇಗ ಇಳಿಕೆಯಾಗಿದೆ.
📍Total #COVID19 Cases in India (as on June 14, 2020)
▶️46.54% Active cases (149,348)
▶️50.6% Cured/Discharged/Migrated (162,379)
▶️2.86% Deaths (9,195)Total COVID-19 confirmed cases = Active cases+Cured/Discharged/Migrated+Deaths
Via @MoHFW_INDIA pic.twitter.com/3iw9CLuicN
— #IndiaFightsCorona (@COVIDNewsByMIB) June 14, 2020
ಭಾರತದಲ್ಲಿ ಜುಲೈ ವೇಳೆಗೆ ಸೋಂಕಿತರ ಸಂಖ್ಯೆ ಗರಿಷ್ಠ ಮಟ್ಟ ತಲುಪಬೇಕಿತ್ತು. ಆದರೆ 8 ವಾರಗಳ ಲಾಕ್‌ಡೌನ್ ಘೋಷಣೆಯಿಂದಾಗಿ ಸೋಂಕು ಗರಿಷ್ಠ ಮಟ್ಟಕ್ಕೆ ಹೋಗುವುದು 34ರಿಂದ 76 ದಿನಗಳಷ್ಟು ಮುಂದಕ್ಕೆ ಹೋಗಿದೆ. ಮುಂದಕ್ಕೆ ಹೋಗಿರುವ ಕಾರಣ ಅಗತ್ಯ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲು ಸಮಯ ಸಿಕ್ಕಿದಂತಾಗಿದೆ. ಲಾಕ್‌ಡೌನ್‌ನಿಂದಾಗಿ ಸೋಂಕಿತರ ಸಂಖ್ಯೆ ಶೇ.69ರಿಂದ ಶೇ.97ರಷ್ಟು ಕಡಿಮೆಯಾಗಿದೆ.
ಗರಿಷ್ಠ ಮಟ್ಟ ತಲುಪುವ ಸಂದರ್ಭದಲ್ಲಿ ತೀವ್ರ ನಿಗಾ ಘಟಕ, ವೆಂಟಿಲೇಟರ್, ಐಸೋಲೇಷನ್ ಹಾಸಿಗೆಗಳ ಕೊರತೆ ಕಾಡಬಹುದು. ಹೀಗಾಗಿ ಲಸಿಕೆ ಬರುವವರೆಗೂ ಸೋಂಕಿತರ ಪತ್ತೆ, ತಪಾಸಣೆ, ಕ್ವಾರಂಟೈನ್, ಐಸೊಲೇಷನ್ ಮಾಡುತ್ತಲೇ ಇರಬೇಕು ಎಂದು ಎಂದು ತಿಳಿಸಿದೆ.
ಭಾರತದಲ್ಲಿ 3,33,012 ಮಂದಿಗೆ ಸೋಂಕು ಬಂದಿದ್ದರೆ 1,69,691 ಮಂದಿ ಗುಣಮುಖರಾಗಿದ್ದಾರೆ. ಭಾನುವಾರ ಒಂದೇ ದಿನ 14,718 ಮಂದಿಗೆ ಸೋಂಕು ತಗಲಿದ್ದು, 408 ಮಂದಿ ಮೃತಪಟ್ಟಿದ್ದಾರೆ. ಇನ್ನು ಕರ್ನಾಟಕದಲ್ಲಿಒಟ್ಟು 7,000 ಮಂದಿಗೆ ಮಂದಿಗೆ ಸೋಂಕು ಬಂದಿದ್ದರೆ, 3,955 ಮಂದಿ ಗುಣಮುಖರಾಗಿದ್ದಾರೆ. 2,956 ಸಕ್ರಿಯ ಪ್ರಕರಣಗಳಿದ್ದು, 86 ಮಂದಿ ಮೃತಪಟ್ಟಿದ್ದಾರೆ.