ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ರಾಜ್ಯದಲ್ಲಿ 69 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2158ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಯಾದಗಿರಿ 15, ಉಡುಪಿ 16, ಕಲಬುರಗಿ 14, ಬೆಂಗಳೂರು 6, ವಿಜಯಪುರ 1, ಬೀದರ್ 1, ಧಾರವಾಡ 3, ಬಳ್ಳಾರಿ 3, ತುಮಕೂರು 1, ಮಂಡ್ಯ 2, ಕೋಲಾರ 2, ದಕ್ಷಿಣ ಕನ್ನಡ 3, ಬೆಳಗಾವಿ 1 ಮತ್ತು ರಾಮನಗರ 1 ಪ್ರಕರಣಗಳು ಬೆಳಕಿಗೆ ಬಂದಿವೆ. ಒಟ್ಟು 43 ಜನ ಮೃತಪಟ್ಟಿದ್ದು,ಆಸ್ಪತ್ರೆಯಿಂದ 680 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು 1433 ಸಕ್ರಿಯ ಪ್ರಕರಣಗಳಿವೆ.
ಗ್ರೀನ್ ಝೋನ್‍ನಲ್ಲಿದ್ದ ರಾಮನಗರಕ್ಕೆ ಕೊರೊನಾ ಮಹಾಮಾರಿ ಮಹಾಮಾರಿ ಎಂಟ್ರಿಕೊಟಿದೆ. ತಮಿಳುನಾಡಿನಿಂದ ವಾಪಸ್ ಬಂದಿದ್ದ ಮಗುವಿಗೆ ಕೊರೊನಾ ದೃಢವಾಗಿದೆ. 69 ಸೋಂಕಿತರಲ್ಲಿ 55 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದಿರುವವರಿಗೆ ಕೊರೊನಾ ಬಂದಿದೆ.