ಡಿವಿಜಿ ಸುದ್ದಿ,ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಇಂದು ಒಂದೇ ದಿನ 45 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1032ಕ್ಕೆ ಏರಿಕೆಯಾಗಿದೆ.

ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ 13, ಉಡುಪಿ 5, ದಕ್ಷಿಣ ಕನ್ನಡ 16 ಬೀದರ್ 3, ಚಿತ್ರದುರ್ಗ 2, ಹಾಸನ 3 ಮತ್ತು ಶಿವಮೊಗ್ಗ, ಬಾಗಲಕೋಟೆ, ಕೋಲಾರದಲ್ಲಿ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ 35 ಜನ ಕೊರೊನಾಗೆ ಬಲಿಯಾಗಿದ್ದಾರೆ. 476 ಜನ ಗುಣಮುಖರಾಗಿದ್ದಾರೆ. 520 ರೋಗಿಗಳು ರಾಜ್ಯದ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳೂರಿಗೆ ದುಬೈನಿಂದ ಬಂದವರು ಸೇರಿ ಒಟ್ಟು 16 ಜನರಿಗೆ ಸೋಂಕು ದೃಢವಾಗಿದೆ. ಮೇ 12 ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು.



