ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿಂದು 8 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಆರು ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 333 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 272 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 08 ಸಾವು ಸಂಭವಿಸಿದ್ದು ಪ್ರಸ್ತುತ 53 ಸಕ್ರಿಯ ಪ್ರಕರಣಗಳು ಇವೆ.
ರೋಗಿ ಸಂಖ್ಯೆ 16668 17 ವರ್ಷದ ಬಾಲಕ ಐ.ಎಲ್.ಐ ಹಿನ್ನೆಲೆ ಹೊಂದಿದ್ದಾರೆ, ರೋಗಿ ಸಂಖ್ಯೆ 16669 32 ವರ್ಷದ ಪುರುಷ ಇವರು ಬೆಂಗಳೂರು ಜಿಲ್ಲೆಯ ಪ್ರವಾಸ ಹೊಂದಿದ್ದಾರೆ. ರೋಗಿ ಸಂಖ್ಯೆ 16670 35 ವರ್ಷದ ಪುರುಷ ಇವರು ರೋಗಿ ಸಂಖ್ಯೆ 11158 ರ ಸಂಪರ್ಕಿತರು. ರೋಗಿ ಸಂಖ್ಯೆ 16671 40 ವರ್ಷದ ಪುರುಷ ಇವರು ರೋಗಿ ಸಂಖ್ಯೆ 9896 ರ ಸಂಪರ್ಕ ಹೊಂದಿದ್ದಾರೆ ರೋಗಿ ಸಂಖ್ಯೆ 16672 19 ವರ್ಷದ ಯುವಕ, ಇವರು ರೋಗಿ ಸಂಖ್ಯೆ 10386 ರ ಸಂಪರ್ಕ ಹೊಂದಿದ್ದಾರೆ. ರೋಗಿ ಸಂಖ್ಯೆ 16673 24 ವರ್ಷದ ಯುವಕ, 16675 80 ವರ್ಷದ ವೃದ್ದ ಇವರುಗಳ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ರೋಗಿ ಸಂಖ್ಯೆ 9890, 9891, 9895, 9896, 11157, 11158, ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಸಂಪೂರ್ಣರಾಗಿ ಇಂದು ಬಿಡುಗಡೆ ಹೊಂದಿದ್ದಾರೆ.



