ಡಿವಿಜಿ ಸುದ್ದಿ, ಮೈಸೂರು: ಕೊರೊನಾ ತಪಾಸಣೆಗೆ ಬಂದಿದ್ದ ವ್ಯಕ್ತಿಯೊಬ್ಬ ಮೈಸೂರು ಜಿಲ್ಲಾಧಿಕಾರಿ ನಂಬರ್ ಕೊಟ್ಟು ಹೋಗಿದ್ದಾನೆ. ತಾಪಾಸಣಾ ಸಿಬ್ಬಂದಿ ಪಾಸಿಟಿವ್ ತಿಳಿಸಿಲು ಫೋನ್ ಮಾಡಿದ್ಧಾಗ ಜಿಲ್ಲಾಧಿಕಾರಿ ಫೋನ್ ಹೋಗಿದೆ. ಇದನ್ನು ಕಂಡ ಜಿಲ್ಲಾಧಿಕಾರಿ ಅಚ್ಚರಿಗೆ ಒಳಗಾಗಿದ್ದಾರೆ…
ಇಂತಹದೊಂದು ಅಪರೂಪದ ಘಟನೆ ಮೈಸೂರಿನ ಹೆಬ್ಬಾಳ ಬಡಾವಣೆಯಲ್ಲಿ ನಡೆದಿದೆ. ಕೊರೊನಾ ತಪಾಸಣೆಗೆ ಬಂದ ವ್ಯಕ್ತಿ, ಪರೀಕ್ಷೆ ವೇಳೆ ತನ್ನ ನಂಬರ್ ಬದಲಿಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಅವರ ನಂಬರ್ ಕೊಟ್ಟು ಜಿಲ್ಲಾಡಳಿತಕ್ಕೆ ಕಣ್ಣು ತಪ್ಪಿಸಿದ್ಧಾನೆ. ಇದಾದ ಬಳಿಕ ಆ ವ್ಯಕ್ತಿಯ ಕೊರೊನಾ ವರದಿ ಬಂದಿದ್ದು, ಆತನಿಗೆ ಕೊರೊನಾ ಇರುವುದು ದೃಢಪಟ್ಟಿದೆ.
ಕೊರೊನಾ ದೃಢಪಟ್ಟ ವ್ಯಕ್ತಿ ನೀಡಿದ ನಂಬರ್ ಗೆ ಮೈಸೂರು ಜಿಲ್ಲಾಡಳಿತದ ಕೊರೊನಾ ಕಂಟ್ರೋಲ್ ರೂಂನಿಂದ ಕರೆ ಮಾಡಿದ್ದಾರೆ. ನಿಮಗೆ ಪಾಸಿಟಿವ್ ಬಂದಿದೆ ಎಲ್ಲಿದ್ದೀರಾ ಎಂದು ಕೇಳಿದ್ದಾರೆ. ಈ ಮಾತುಗಳನ್ನು ಕೇಳಿದ ಜಿಲ್ಲಾಧಿಕಾರಿ ಒಮ್ಮೆ ಗಾಬರಿಗೊಂಡಿದ್ದಾರೆ. ನನಗೆ ಕೊರೊನಾ…? ನಾನು ಜಿಲ್ಲಾಧಿಕಾರಿ ಮಾತಾನಾಡುತ್ತಿದ್ದೇನೆ ಎಂದು ಡಿಸಿ ಅಭಿರಾಮ್ ಅವರು ಹೇಳಿದ್ದಾಗ ಕರೆ ಮಾಡಿದ ಸಿಬ್ಬಂದಿಯೂ ಅಚ್ಚರಿಗೊಂಡಿದ್ದಾರೆ.
ಆಗ ಸಿಬ್ಬಂದಿ ಫೋನ್ ನಂಬರ್ ಚೆಕ್ ಮಾಡಿದಾಗ ಕೊರೊನಾ ಸೋಂಕಿತ, ತನ್ನ ನಂಬರ್ ಬದಲಿಗೆ ಜಿಲ್ಲಾಧಿಕಾರಿ ನಂಬರ್ ಕೊಟ್ಟು ಹೋಗಿದ್ಧನೆ ಎಂದು ಗೊತ್ತಾಗಿದೆ. ರಾಂಗ್ ನಂಬರ್ ಕೊಟ್ಟು ಕೊರೊನಾ ಸೋಂಕಿತನ ಹುಡುಕಾಟ ಶುರುವಾಗಿದೆ.
ಈ ರೀತಿ ಕೆಲಸ ಮಾಡಿದ ವ್ಯಕ್ತಿಗೆ ಸಲಹೆ ನೀಡಿರುವ ಜಿಲ್ಲಾಧಿಕಾರಿ ಅಭಿರಾಮ್, ಇಂತಹ ಕೆಲಸ ಮಾಡಿದರೆ, ಕೊರೊನಾ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಸಾರ್ವಜನಿಕರು ಕೊರೊನಾ ಕಂಟ್ರೋಲ್ ರೂಂಗೆ ಸರಿಯಾಗಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.