ಡಿವಿಜಿ ಸುದ್ದಿ, ಬೆಂಗಳೂರು: ಇಂದು 19 ಮಂದಿಗೆ ಕೊರೊನಾ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 692ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ ಬಾಗಲಕೋಟೆಯಲ್ಲಿ 13 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಬಾಗಲಕೋಟೆ ಜನರು ಬೆಚ್ಚಿಬೀಳುವಂತಾಗಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಇಂದು ಬೆಳಗ್ಗೆ ಬುಲೆಟಿನ್ ನಲ್ಲಿ ಬಾಗಲಕೋಟೆಯಲ್ಲಿ 13, ಬೆಂಗಳೂರು 2, ದಕ್ಷಿಣ ಕನ್ನಡ 3 ಮತ್ತು ಕಲಬುರಗಿಯಲ್ಲಿ 1 ಕೊರೊನಾ ಪ್ರಕರಣ ಬೆಳಕಿಗೆ ಬಂದಿದೆ. ಬಾಗಲಕೋಟೆಯ ಬದಾಮಿ ತಾಲೂಕಿನ ಡಾಣಕಶಿರೂರು ಗ್ರಾಮದ ಗರ್ಭಿಣಿ (ರೋಗಿ 607)ರಿಂದ 13 ಮಂದಿಗೆ ಸೋಂಕು ತಗುಲಿದೆ. ಗರ್ಭಿಣಿಯ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 13 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಮಂಗಮ್ಮನಪಾಳ್ಯದ ಕೂಲಿ ಕಾರ್ಮಿಕನಿ(ರೋಗಿ ನಂಬರ್ 654)ಗೆ ಸೋಂಕು ತಗುಲಿರೋದು ದೃಢವಾಗ್ತಿದ್ದಂತೆ ಆತನ ಕುಟುಂಬಸ್ಥರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಕಾರ್ಮಿಕನ ಪುತ್ರ ಮತ್ತು ಪತ್ನಿಗೆ ಸೋಂಕು ತಗುಲಿದೆ. ಕಾರ್ಮಿಕನ ಪುತ್ರ ನಗರದಲ್ಲಿ ಡೆಲಿವರಿ ಬಾಯ್ (ರೋಗಿ ನಂಬರ್ 678) ಆಗಿ ಕೆಲಸ ಮಾಡಿದ್ದ, ಹೀಗಾಗಿ ಬೆಂಗಳೂರಿನ ಜನರಲ್ಲಿ ಆಘಾತ ಮೂಡಿಸಿದೆ. ಇದೀಗ ಆರೋಗ್ಯ ಇಲಾಖೆಗೆ ಡೆಲಿವರಿ ಬಾಯ್ ಟ್ರಾವೆಲ್ ಹಿಸ್ಟರಿ ಪತ್ತೆ ಪತ್ತೆ ಹಚ್ಚೋದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.



