ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಇಂದು 5,483 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 84 ಮಂದಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,24,115 ಕ್ಕೆ ಏರಿಕೆಯಾಗಿದ್ದು, ಈವರೆಗೆ 2,314 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 49,788 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 72,005 ಸಕ್ರಿಯ ಪ್ರಕರಣಗಳಿವೆ.
ಇಂದಿನ 31/07/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMMhttps://t.co/EUGwLxDUCA pic.twitter.com/3tbp1Bc6YQ
— Karnataka Health Department (@DHFWKA) July 31, 2020
ಬೆಂಗಳೂರಿನಲ್ಲಿ ಒಂದೇ ದಿನ 2220 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 20 ಮಂದಿ ಮೃತಪಟ್ಟಿದ್ದಾರೆ. ಇನ್ನು ಬಳ್ಳಾರಿ 340, ಬೆಳಗಾವಿ 217, ಉಡುಪಿ 213, ದಕ್ಷಿಣ ಕನ್ನಡ 204, ಮೈಸೂರು 204, ಧಾರವಾಡ 180, ಶಿವಮೊಗ್ಗ 158, ಕಲಬುರ್ಗಿ 144, ದಾವಣಗೆರೆ 122, ರಾಯಚೂರು 119, ವಿಜಯಪುರ 118, ಬೆಂಗಳೂರು ಗ್ರಾಮಾಂತರ ಜಿಲ್ಲೆ 105 ಪ್ರಕರಣಗಳು ಪತ್ತೆಯಾಗಿವೆ.



