ಡಿವಿಜಿ ಸುದ್ದಿ, ಧಾರವಾಡ: ಮಧ್ಯಾಹ್ನ ಕರೆ ಮಾಡಿ ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮನೆ ಬಳಿ ಸಿಬ್ಬಂದಿ ಕಳುಹಿಸಿದ್ದ ಆರೋಗ್ಯ ಇಲಾಖೆ, ಸಂಜೆ ಹೊತ್ತಿಗೆ ಸೋಂಕು ಇಲ್ಲ ಎಂದು ಹೇಳಿದೆ. ಇದರ ಪರಿಣಾಮ ಜನರಲ್ಲಿ ಅನುಮಾನ ಮೂಡಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡದ ಡಿಪೋ ಸಿಬ್ಬಂದಿಗೆ ಇಂತಹ ಅನುಭವವಾಗಿದೆ.
ಸ್ನೇಹಿತರೊಬ್ಬರೊಂದಿಗೆ ಹೋಂ ಕ್ವಾರಂಟೈನ್ ಆಗಿರುವ ಈತನಿಗೆ ಜುಲೈ 17ರಂದು ಆರೋಗ್ಯ ಇಲಾಖೆ ಅಧಿಕಾರಿಗಳು ಕರೆ ಮಾಡಿದ್ದರು. ಮನೆ ಹತ್ತಿರ ಸಿಬ್ಬಂದಿ ಕಳುಹಿಸಿ ಆಂಬುಲೆನ್ಸ್ಗಾಗಿ ಕಾಯುವಂತೆ ಸೂಚಿಸಿದ್ದರು. ಆದರೆ, ಸಂಜೆ ನೆಗೆಟಿವ್ ಎಂದು ಹೇಳಿದ್ದಾರೆ.



