ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಇಂದು 97 ಮಂದಿಯಲ್ಲಿ ಕರೊನಾ ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 2056ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಚಿಕ್ಕಬಳ್ಳಾಪುರದಲ್ಲಿ 26, ಹಾಸನ 14, ಉಡುಪಿ 18, ದಾವಣಗೆರೆ 4, ಯಾದಗಿರಿ 6, ಕೊಡಗು 1, ತುಮಕೂರು 2, ಮಂಡ್ಯ 15, ಕಲಬುರಗಿ 6, ಉತ್ತರ ಕನ್ನಡ 2, ವಿಜಯಪುರ 1, ಧಾರವಾಡ 1, ದಕ್ಷಿಣ ಕನ್ನಡ 1 ಪ್ರಕರಣಗಳು ಬೆಳಕಿಗೆ ಬಂದಿವೆ.
ಇಂದು 26 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇವರೆಗೆ 634 ಜನ ಡಿಸ್ಚಾರ್ಜ್ ಆದಂತಾಗಿದೆ. 1378 ಪ್ರಕರಣಗಳು ಸಕ್ರಿಯವಾಗಿದ್ದು, 42 ಜನ ಮೃತಪಟ್ಟಿದ್ದಾರೆ.