ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಇಂದು ಕೋವಿಡ್–19 ದೃಢಪಟ್ಟ 143 ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 1,605ಕ್ಕೆ ಏರಿಕೆಯಾಗಿದೆ.
ಒಟ್ಟು 992 ಸೋಂಕಿತರು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 41 ಮಂದಿ ಮೃತಪಟ್ಟಿದ್ದು, 571 ಮಂದಿ ಗುಣಮುಖರಾಗಿದ್ದಾರೆ. ಇಂದು ಬಾಗಲಕೋಟೆಯ 6 ಮಂದಿ, ದಾವಣೆಗೆರೆಯ ಐವರು ಹಾಗೂ ದಕ್ಷಿಣ ಕನ್ನಡದ 3 ಮಂದಿ, ಮಂಡ್ಯದಲ್ಲಿ ಒಬ್ಬರು ಸೇರಿದಂತೆ ಒಟ್ಟು 15 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಉಡುಪಿ 26, ಮಂಡ್ಯ 33, ಹಾಸನ 13, ಬಳ್ಳಾರಿ 11, ಬೆಂಗಳೂರು 6, ದಾವಣಗೆರೆ 3, ರಾಯಚೂರು ಹಾಗೂ ಧಾರವಾಡದಲ್ಲಿ ತಲಾ 5, ಉತ್ತರ ಕನ್ನಡ 7, ಶಿವಮೊಗ್ಗ 6, ಬೆಳಗಾವಿ 9, ದಕ್ಷಿಣ ಕನ್ನಡ 5, ಕೋಲಾರ ಹಾಗೂ ಗದಗನಲ್ಲಿ ತಲಾ 2, ಚಿಕ್ಕಬಳ್ಳಾಪುರ 2, ತುಮಕೂರು, ವಿಜಯಪುರ ಮತ್ತು ಮೈಸೂರು ತಲಾ ಒಂದು ಹಾಗೂ ಇತರೆ 5 ಪ್ರಕರಣಗಳು ಬೆಳಕಿಗೆ ಬಂದಿದೆ.
ಕೋವಿಡ್19: ಸಂಜೆಯ ವರದಿ 21/05/2020#KarnatakaFightsCorona #IndiaFightsCorona pic.twitter.com/nfSDcUjFLE
— B Sriramulu (@sriramulubjp) May 21, 2020



