ನವದೆಹಲಿ: ದೇಶದಾದ್ಯಂತ ಒಂದೇ ದಿನ 86,432 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 1,089 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು 40,23,179 ಮಂದಿಗೆ ಸೋಂಕು ತಗುಲಿದೆ.
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ಸೋಂಕಿತರ ಚೇತರಿಕೆ ಪ್ರಮಾಣವು ಶೇ.77.23ಕ್ಕೆ ಏರಿಯಾಗಿದ್ದು, ಸಾವಿನ ಪ್ರಮಾಣ ಶೇ.1.73 ಕ್ಕೆ ಇಳಿದಿದೆ. ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 69,561ಕ್ಕೆ ಏರಿಕೆಯಾಗಿದೆ. 31,07,223 ಸೋಂಕಿತರು ಗುಣಮುಖರಾಗಿದ್ದು, 8,46,395 ಸಕ್ರಿಯ ಪ್ರಕರಣಗಳಿವೆ.
ಮಹಾರಾಷ್ಟ್ರದಲ್ಲಿ 8,63,062 ಪ್ರಕರಣಗಳು ವರದಿಯಾಗಿದ್ದು, 6,25,773 ಸೋಂಕಿತರು ಗುಣಮುಖರಾಗಿದ್ದು, 2,11,325 ಪ್ರಕರಣಗಳು ಸಕ್ರಿಯವಾಗಿವೆ. 25,964 ಮಂದಿ ಮೃತಪಟ್ಟಿದ್ದಾರೆ. ಆಂಧ್ರ ಪ್ರದೇಶದಲ್ಲಿ 4,76,506 ಜನರಿಗೆ ಸೋಂಕು ಪತ್ತೆಯಾಗಿದೆ. 1,02,067 ಸಕ್ರಿಯ ಪ್ರಕರಣಗಳಿದ್ದು, 3,70,163 ಮಂದಿ ಗುಣಮುಖರಾಗಿದ್ದಾರೆ. 4,276 ಜನರು ಮೃತಪಟ್ಟಿದ್ದಾರೆ.
ತಮಿಳುನಾಡಿನಲ್ಲಿ 51,633 ಸಕ್ರಿಯ ಪ್ರಕರಣಗಳಿದ್ದು, 7,687 ಮಂದಿ ಕೊರೊನಾ ವೈರಸ್‌ನಿಂದಾಗಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಒಟ್ಟಾರೆ 3,79,486 ಜನರಿಗೆ ಸೋಂಕು ತಗುಲಿದ್ದು, 6,170 ಜನರು ಸಾವಿಗೀಡಾಗಿದ್ದಾರೆ. 99,120 ಸಕ್ರಿಯ ಪ್ರಕರಣಗಳಿದ್ದು, 2,74,196 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.



