ನವದೆಹಲಿ: ದೇಶಾದ್ಯಂತ 24 ಗಂಟೆಯಲ್ಲಿ 27,114 ಜನರಿಗೆ ಸೋಂಕು ಪತ್ತೆಯಾಗಿದ್ದು, 519 ಸೋಂಕಿತರು ಮೃತಪಟ್ಟಿದ್ದಾರೆ.
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ದೇಶದಲ್ಲಿ ಒಟ್ಟು 8,20,916 ಸೋಂಕಿತರಿದ್ದಾರೆ. ಇದರಲ್ಲಿ 5,15,385 ಮಂದಿ ಗುಣಮುಖರಾಗಿದ್ದು, ಇನ್ನೂ 2,83,407 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟವರ ಸಂಖ್ಯೆ 22,123ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ 7,862 ಹೊಸ ಪ್ರಕರಣಗಳು ವರದಿಯಾಗಿವೆ. ಇಲ್ಲಿ ಇದುವರೆಗೆ ಒಟ್ಟು 2,38,461 ಮಂದಿಗೆ ಸೋಂಕು ತಗುಲಿದ್ದು, 1,32,625 ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 95,943 ಪ್ರಕರಣಗಳು ಸಕ್ರಿಯವಾಗಿವೆ. 9,893 ಜನರು ಮೃತಪಟ್ಟಿದ್ದಾರೆ.
ತಮಿಳುನಾಡಿನಲ್ಲಿ 3,680 ಹೊಸ ಪ್ರಕರಣಗಳು ವರದಿಯಾಗಿವೆ. 1,829 ಜನರು ಮೃತಪಟ್ಟಿದ್ದಾರೆ.ರಾಜಧಾನಿ ದೆಹಲಿಯಲ್ಲಿ ಒಟ್ಟು 1 09,140 ಮಂದಿಗೆ ಸೋಂಕು ತಗುಲಿದೆ. ಗುಜರಾತ್‌ನ 40,069 ಪಾಸಿಟಿವ್ ಪತ್ತೆಯತಾಗಿವೆ.
ಸೋಂಕು ಪ್ರಕರಣಗಳಿಲ್ಲಿ 6ನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 33,418ಕ್ಕೆ ಏರಿಕೆಯಾಗಿದೆ. 543 ಮಂದಿ ಮೃತಪಟ್ಟಿದ್ದಾರೆ.ಲ 13,836 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇನ್ನೂ 19,035 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.



