ನವದೆಹಲಿ: ದೇಶದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂದು ದಾಖಲೆಯ 26,506 ಪ್ರಕರಣಗಳು ದಾಖಲಾಗಿವೆ. ಇದು ಒಂದೇ ದಿನದಲ್ಲಿ ದಾಖಲಾಗಿರುವ ಅತಿ ಹೆಚ್ಚು ಪ್ರಕರಣಗಳಾಗಿವೆ.
ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 7,93,802 ತಲುಪಿದೆ. ಕೊರೊನಾ ಸೋಂಕಿನಿಂದ ಒಂದೇ ದಿನ 475 ಮಂದಿ ಮೃತಪಟ್ಟಿದದ್ದು, 21,604 ಮಂದಿ ಮೃತಪಟ್ಟಿದ್ದಾರೆ.
2,76,685 ಮಂದಿ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ 4,95,513 ಜನ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಗುಜರಾತ್‌ನಲ್ಲಿ 39,194, ದೆಹಲಿ 1,07,051, ತಮಿಳುನಾಡು 1,26,581 ಮಂದಿಗೆ ಸೋಂಕು ತಗುಲಿದೆ.
#CoronaVirusUpdates: #COVID19 India Tracker
(As on 10 July, 2020, 08:00 AM)▶️ Confirmed cases: 793,802
▶️ Active cases: 276,685
▶️ Cured/Discharged/Migrated: 495,513
▶️ Deaths: 21,604#IndiaFightsCorona#StayHome #StaySafe @ICMRDELHIVia @MoHFW_INDIA pic.twitter.com/fM5wc4ysel
— #IndiaFightsCorona (@COVIDNewsByMIB) July 10, 2020