ಡಿವಿಜಿ ಸುದ್ದಿ, ಹರಿಹರ : ನಗರದ ಗಾಂಧಿನಗರದಲ್ಲಿ ಕೊರೊನಾ ಪಾಸಿಟಿವ್ ಪತ್ತೆ ಹಿನ್ನೆಲೆ ಗಾಂಧಿನಗರದ ಎರಡು ಮತ್ತು ಮೂರನೇ ಕ್ರಾಸ್ ಸೀಲ್ ಡೌನ್ ಮಾಡಲಾಗಿದೆ.
ಗಾಂಧಿನಗರದ ಎರಡನೇ ಕ್ರಾಸ್ ನಲ್ಲಿ ವಾಸವಿದ್ದ ವ್ಯಕ್ತಿಯೋರ್ವರಿಗೆ ಕೋವಿಡ್ 19 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಗಾಂಧಿನಗರದ ಎರಡನೇ ಮತ್ತು ಮೂರನೇ ಕ್ರಾಸ್ ಗಳನ್ನು ನಗರಸಭೆಯ ಪೌರಾಯುಕ್ತೆ ಲಕ್ಷ್ಮಿ ಅವರು ಸೀಲ್ ಡೌನ್ ಮಾಡಿರುವುದಾಗಿ ಮಾಹಿತಿ ನೀಡಿದರು.
ಕೋವಿಡ್ 19 ಧೃಡಪಟ್ಟ ವ್ಯಕ್ತಿಯುತ ದಾವಣಗೆರೆಯ ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳ ವಾಹನ ಚಾಲಕ ಎಂದು ತಿಳಿದುಬಂದಿದೆ. ಆರೋಗ್ಯ ಇಲಾಖೆ ಮುಂದಿನ ಕ್ರಮವನ್ನು ಕೈಗೊಳ್ಳಲಿದೆ ಎಂದು ಪೌರಾಯುಕ್ತರು ತಿಳಿಸಿದರು.



