ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು11 ಮಂದಿ ಮೃತಪಟ್ಟಿದ್ದಾರೆ.
ಇಂದು ಜಿಲ್ಲೆಯಲ್ಲಿ ಬರೋಬ್ಬರಿ 223 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,658ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಕೊರೊನಾದಿಂದ 106 ಮಂದಿ ಗುಣಮುಖರಾಗಿದ್ದು, ಒಟ್ಟುಗುಣಮುಖರಾದವರ ಸಂಖ್ಯೆ 2,333ಕ್ಕೆ ಏರಿಕೆಯಾಗಿದೆ. 11 ಮಂದಿ ಮೃತಪಟ್ಟಿದ್ದು, ಈವರೆಗೆ ಒಟ್ಟು 100 ಮಂದಿ ಸಾನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 1225 ಸಕ್ರಿಯ ಪ್ರಕಣಗಳಿವೆ.
ಇಂದು ಪತ್ತೆಯಾದ 223 ಕೇಸ್ ಗಳಲ್ಲಿ ದಾವಣಗೆರೆಯಲ್ಲಿ ಅಧಿಕ 113, ಹರಿಹರ 60, ಜಗಳೂರು 12, ಚನ್ನಗಿರಿ 20 ,ಹೊನ್ನಾಳಿ 17, ಹೊರ ಜಿಲ್ಲೆಯ ಒಬ್ಬರಲ್ಲಿ ಪಾಸಿಟಿವ್ ಪತ್ತೆಯಾಗಿದೆ.
ಎಸ್ ಎಸ್ ಎಂ ನಗರದ 58 ವರ್ಷದ ಮಹಿಳೆ, ಲೇಬರ್ ಕಾಲೋನಿಯ 68 ವರ್ಷದ ವೃದ್ಧ, ಶಂಕರ ವಿಹಾರ ಬಡಾವಣೆಯ 63 ವರ್ಷದ ಮಹಿಳೆ, ಎಸ್ ಎಸ್ ಬಡಾವಣೆಯ 49 ವರ್ಷ ಪುರುಷ, ಹರಿಹರದ ಜೆಸಿ ಬಡಾವಣೆಯ 58 ವರ್ಷದ ಪುರುಷ , ದಾವಣಗೆರೆಯ ಕೈಗಾರಿಕಾ ಪ್ರದೇಶದ 48 ವರ್ಷದ ಮಹಿಳೆ , ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ್ಳದ 62 ವರ್ಷ ವೃದ್ಧ, ಎಂಬಿ ಕೇರಿಯ 67 ವರ್ಷ ವೃದ್ಧ , ಹೆಚ್ ಕಲ್ಪನಹಳ್ಳಿಯ 48 ವರ್ಷದ ಪುರುಷ ಬಾಷಾನಗರದ 77 ವರ್ಷದ ವೃದ್ಧ ಹಾಗೂ ಹೊಂಡದ ಸರ್ಕಲ್ ನ 41 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.



