ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ಪಾಸಿಟಿವ್ ವರದಿಯಾಗಿದ್ದ ರೋಗಿ ಸಂಖ್ಯೆ 25826 ನೆಲೆಸಿದ್ದ ಜುಗ್ಲಿಭಾವಿ ರಸ್ತೆ (ಮಹಾರಾಜಪೇಟೆ) ಪ್ರದೇಶವನ್ನು ವಿಪತ್ತು ನಿರ್ವಹಣೆ ಕಾಯ್ದೆ ಅಡಿ “ಕಂಟೈನ್ಮೆಂಟ್ ವಲಯ”ವೆಂದು ಘೋಷಿಸಿ ಕ್ರಮ ಕೈಗೊಳ್ಳಲಾಗಿದೆ.
ಜುಲೈ 7 ರ ಸಂಜೆಯಿಂದ ಕೋವಿಡ್ ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 25826 ನೆಲೆಸಿದ್ದ ಜುಗ್ಲಿಭಾವಿ ರಸ್ತೆ(ಮಹಾರಾಜಪೇಟೆ) ಮನೆಯ ಪೂರ್ವಕ್ಕೆ ನ್ಯೂ ಮಸ್ಜಿದ್ ಗಲ್ಲಿ, ಪಶ್ಚಿಮಕ್ಕೆ ಮಮ್ಮಿ ದಾದಾಪೀರ್ ಹೌಸ್, ಉತ್ತರಕ್ಕೆ ಜುಗ್ಲಿಭಾವಿ ರಸ್ತೆ, ದಕ್ಷಿಣಕ್ಕೆ ಚಾರಲಿಗರಡಿಮನೆ ಹಿಂಭಾಗ.
ಹಾಗೂ ಈ ಬಡಾವಣೆಯ ಎಲ್ಲೆಯಲ್ಲಿರುವ ಪೂರ್ವಕ್ಕೆ ನರಸರಾಜ್ ಪೇಟೆ, ಪಶ್ಚಿಮಕ್ಕೆ ಮಹಾರಾಜಪೇಟೆ ರಸ್ತೆ, ಉತ್ತರಕ್ಕೆ ಬಸವರಾಜಪೇಟೆ, ದಕ್ಷಿಣಕ್ಕೆ ಚೌಕಿಪೇಟೆ ಮುಖ್ಯರಸ್ತೆ ಈ ವ್ಯಾಪ್ತಿಯಲ್ಲಿದ್ದ 04 ಮನೆಗಳು, 20 ಜನಸಂಖ್ಯೆ ಹಾಗೂ 200 ಮೀಟರ್ ಬಫರ್ ಝೋನ್ ಸೇರಿದಂತೆ ಈ ವಲಯವನ್ನು ಕಂಟೈನ್ಮೆಂಟ್ ಝೋನ್ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.



