ನವದೆಹಲಿ: ಯುವ ಸಮೂಹದಿಂದಲೇ ಕೊರೊನಾವೈರಸ್ ಹೆಚ್ಚು ಹರಡುತ್ತಿದೆ. ಈ ವಯಸ್ಸಿನಲ್ಲಿ ಕೊರೊನಾ ವೈರಸ್ ಬಂದಿರುವುದು ಗೊತ್ತಾಗದೇ, ಇತರರಿಗೆ ರೋಗಗಳನ್ನು ಹರಡುತ್ತಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ತಿಂಗಳಲ್ಲಿ ಯುವ ಸಮೂಹದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಆರೋಗ್ಯ ಸೇವೆಗಳು ಸರಿಯಾಗಿಲ್ಲದ ಪ್ರದೇಶಗಳಲ್ಲಿ ವಾಸಿಸುವ ಹಿರಿಯ ನಾಗರಿಕರು, ಅನಾರೋಗ್ಯ ಪೀಡಿತರಿಗೆ ಹೆಚ್ಚಿನ ಸಮಸ್ಯೆ ಆಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪೆಸಿಫಿಕ್ ಪ್ರಾದೇಶಿಕ ನಿರ್ದೇಶಕ ತಕೇಶಿ ಕಸೈ ಅವರು ಹೇಳಿದ್ದಾರೆ.

ಯುವ ಸಮೂಹ , ಅದರಲ್ಲೂ 20 ರಿಂದ 40ರ ವಯಸ್ಸಿನವರಲ್ಲಿ ರೋಗ ಹರಡಲು ಕಾರಣರಾಗಿರುತ್ತಾರೆ. ಈ ವಯಸ್ಸಿನಲ್ಲಿ ಸೋಂಕು ತಗುಲಿರುವುದೇ ಗೊತ್ತಿರುವುದಿಲ್ಲ. ಇದು ಹೆಚ್ಚಿನ ಅಪಾಯ ತಂದುದೆ ಎಂದಿದ್ದಾರೆ ಕಸೈ.
ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಕೆಲವು ರಾಷ್ಟ್ರಗಳು ಮತ್ತೆ ಲಾಕ್‍ಡೌನ್ ಜಾರಿ ಮಾಡಿವೆ. ಕೊರೊನಾದಿಂದ ಜಾಗತಿಕ ಆರ್ಥಿಕತೆ ಕುಸಿದಿದ್ದು, ಹಲವಾರು ಕಂಪನಿಗಳು ಕೊರೊನಾ ಲಸಿಕೆ ತಯಾರಿಕೆಗೆ ಸಂಶೋಧನೆಯಲ್ಲಿ ನಿರತರಾಗಿವೆ. ಜಗತ್ತಿನಲ್ಲಿ ಈವರೆಗೆ 2 ಕೋಟಿ ಸೋಂಕಿತರಿದ್ದು 7,70,000 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಲಸಿಕೆ ತಯಾರಿಸುವಾಗ ಅಗತ್ಯವಿರುವ ಎಲ್ಲ ಸಂಶೋಧನೆ ಮತ್ತು ಅಭಿವೃದ್ಧಿ ಹಂತಗಳನ್ನು ಅನುಸರಿಸುವಂತೆ ಡಬ್ಲ್ಯುಎಚ್‍ಒ ಹೇಳಿದೆ.




