ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿಂದು ದಾಖಲೆಯ 388 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಲಾಕ್ ಡೌನ್ ಸಡಿಲಿಕೆ ನಂತರ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ರಾಜ್ಯದಲ್ಲಿ ಇದುವರೆಗೆ ಒಂದೇ ದಿನದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿರಲಿಲ್ಲ. ಇಂದು ರಾಜ್ಯದಲ್ಲಿ ಬರೋಬ್ಬರಿ 388 ಕೇಸ್ ಗಳು ಪತ್ತೆಯಾಗುವ ಮೂಲಕ ರಾಜ್ಯದ ಜನರಲ್ಲಿ ಆತಂಕ ಮೂಡಿಸಿದೆ.
ರಾಜ್ಯದಲ್ಲಿ ಒಟ್ಟು 3,796 ಪಾಸಿಟಿವ್ ಪ್ರಕರಣಗಳಿದ್ದು, ಅದರಲ್ಲಿ 2,339 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 52 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 14 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಡುಪಿಯಲ್ಲಿ 150 ಮತ್ತು ಕಲಬುರ್ಗಿಯಲ್ಲಿ 100 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಬೆಳಗಾವಿಯಲ್ಲಿ 51, ರಾಯಚೂರಿನಲ್ಲಿ 16, ಬೆಂಗಳೂರು ನಗರದಲ್ಲಿ 12, ಬೀದರ್‌ನಲ್ಲಿ 10, ಬಾಗಲಕೋಟೆಯಲ್ಲಿ 9, ದಾವಣಗೆರೆಯಲ್ಲಿ 7, ಮಂಡ್ಯದಲ್ಲಿ 4 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
Evening Media Bulletin 02/06/2020.https://t.co/eUbMItjXoV
ಸಂಜೆಯ ಪತ್ರಿಕಾ ಪ್ರಕಟಣೆ 02/06/2020.https://t.co/4TMhDYNU5Y@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMM pic.twitter.com/7YLExSzve0
— Karnataka Health Department (@DHFWKA) June 2, 2020



