Connect with us

Dvgsuddi Kannada | online news portal | Kannada news online

ರಾಜ್ಯದಲ್ಲಿಂದು 947 ಮಂದಿಗೆ ಕೊರೊನಾ ಪಾಸಿಟಿವ್; ಬೆಂಗಳೂರಲ್ಲಿ 503 ಜನರಿಗೆ ಸೋಂಕು ..!

ಪ್ರಮುಖ ಸುದ್ದಿ

ರಾಜ್ಯದಲ್ಲಿಂದು 947 ಮಂದಿಗೆ ಕೊರೊನಾ ಪಾಸಿಟಿವ್; ಬೆಂಗಳೂರಲ್ಲಿ 503 ಜನರಿಗೆ ಸೋಂಕು ..!

ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು,  ಬೆಂಗಳೂರು ಒಂದರಲ್ಲಿಯೇ 503 ಮಂದಿಗೆ ಸೋಂಕು ಬಂದಿದೆ. ಇನ್ನು ರಾಜ್ಯದಲ್ಲಿ  947 ಪ್ರಕರಣಗಳು ಪತ್ತೆಯಾಗಿವೆ.

ಒಟ್ಟು 20 ಮಂದಿ ಮೃತಪಟ್ಟಿದ್ದು, 235 ಮಂದಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 7,074 ಸಕ್ರಿಯ ಪ್ರಕರಣಗಳಿದ್ದು, 7,918 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 246 ಮಂದಿ ಸೋಂಕಿಗೆ  ಬಲಿಯಾಗಿದ್ದಾರೆ. ಒಟ್ಟು 15,242 ಮಂದಿಗೆ ಸೋಂಕು ತಗುಲಿದೆ.

ಇಂದು ಬೆಂಗಳೂರು ನಗರ 503, ಬಳ್ಳಾರಿ 61, ಹಾವೇರಿ 49, ದಕ್ಷಿಣ ಕನ್ನಡ 44, ಉತ್ತರ ಕನ್ನಡ 40, ವಿಜಯಪುರ 39, ಶಿವಮೊಗ್ಗ 22, ಬೆಂಗಳೂರು ಗ್ರಾಮಾಂತರ 21, ಬೀದರ್‌ 17, ಧಾರವಾಡ 17 ಹಾಸನ 16, ಕಲಬುರಗಿ 15, ರಾಯಚೂರು 15, ಚಿಕ್ಕಬಳ್ಳಾಪುರ 13, ದಾವಣಗೆರೆ 12, ರಾಮನಗರ 12, ಚಿಕ್ಕಮಗಳೂರು 10, ಉಡುಪಿ 9, ಮೈಸೂರು 9, ಬಾಗಲಕೋಟೆ 4, ಕೊಡಗು 4, ಕೋಲಾರ 3, ಚಿತ್ರದುರ್ಗ 3, ಯಾದಗಿರಿ 2, ಮಂಡ್ಯ 2, ಬೆಳಗಾವಿ 2, ಗದಗ 2, ತುಮಕೂರು 1 ಪ್ರಕರಣ ದೃಢಪಟ್ಟಿದೆ.

ಇಂದು 235 ಮಂದಿ ಬಿಡುಗಡೆಯಾಗಿದ್ದಾರೆ. ಬಳ್ಳಾರಿ 92, ಕಲಬುರಗಿ 47, ವಿಜಯಪುರ 15, ಮೈಸೂರು 14, ಉಡುಪಿ 11, ಬೀದರ್‌ 11, ಬೆಂಗಳೂರು ನಗರ 10, ದಾವಣಗೆರೆ 8, ಕೊಪ್ಪಳ 6, ಹಾಸನ 6, ಧಾರವಾಡ 5, ಬೆಳಗಾವಿ 3, ಚಿತ್ರದುರ್ಗ 2, ಯಾದಗಿರಿ 2, ದಕ್ಷಿಣ ಕನ್ನಡ , ಚಿಕ್ಕಮಗಳೂರು, ಕೋಲಾರದಲ್ಲಿ ತಲಾ ಒಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

271 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು 171, ಧಾರವಾಡ 17, ಕಲಬುರಗಿ 14, ಬೀದರ್‌ 8, ದಕ್ಷಿಣ ಕನ್ನಡ 8, ಬಳ್ಳಾರಿ 7, ಹಾಸನ 6, ಮೈಸೂರು 5, ದಾವಣಗೆರೆ 4, ಗದಗ 4, ರಾಯಚೂರು 4, ಉಡುಪಿ, ವಿಜಯಪುರ, ಚಾಮರಾಜನಗರ, ತುಮಕೂರು, ಕೋಲಾರ, ಕೊಪ್ಪಳ, ಬೆಳಗಾವಿ, ಕೊಡಗು, ಉತ್ತರ ಕನ್ನಡ, ಬಾಗಲಕೋಟೆಯಲ್ಲಿ ತಲಾ ಒಬ್ಬರು ಐಸಿಯುನಲ್ಲಿದ್ದಾರೆ.

june 30 total

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top