ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿಂದು 135 ಜನರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 2418ಕ್ಕೆ ಏರಿಕೆಯಾಗಿದೆ.
ಇಂದು ಒಂದೇ ದಿನ ಮೂವರು ಕೊರೊನಾದಿಂದ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಕೊರೊನಾದಿಂದ ಬಲಿಯಾದವರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.
ಇಂದು ಕಲಬುಗಿಯಲ್ಲಿ 28, ಯಾದಗಿರಿಯಲ್ಲಿ 16, ಹಾಸನ 15, ದಕ್ಷಿಣ ಕನ್ನಡ 11, ಬೀದರ್ 13, ಉತ್ತರ ಕನ್ನಡ 6, ಉಡುಪಿ 9, ದಾವಣಗೆರೆ 6, ಚಿಕ್ಕಬಳ್ಳಾಪುರ 4, ರಾಯಚೂರು 5, ಬೆಳಗಾವಿ 4, ಬೆಂಗಳೂರು ನಗರ 6, ಚಿಕ್ಕಮಗಳೂರು 3, ವಿಜಯಪುರ 1, ಕೋಲಾರ 1 ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಲಾ 2, ಬಳ್ಳಾರಿ ಹಾಗೂ ಮಂಡ್ಯ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.



