ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿಂದು 11 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 09 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಇಂದು ಬಿಡುಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 365 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 311 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 13 ಸಾವು ಸಂಭವಿಸಿದ್ದು ಪ್ರಸ್ತುತ 41 ಸಕ್ರಿಯ ಪ್ರಕರಣಗಳಿವೆ.
ರೋಗಿ ಸಂಖ್ಯೆ 25829 48 ವರ್ಷದ ವ್ಯಕ್ತಿ, ಮತ್ತು ರೋಗಿ ಸಂಖ್ಯೆ 25830 55 ವರ್ಷದ ವ್ಯಕ್ತಿ ಇವರು ತೀವ್ರ ಉಸಿರಾಟ ತೋಂದರೆ (ಸಾರಿ ಕೇಸ್) ರೋಗಿ ಹಿನ್ನೆಲೆಯನ್ನು ಹೊಂದಿದ್ದಾರೆ.
ರೋಗಿ ಸಂಖ್ಯೆ 25828 62 ವರ್ಷದ ವೃದ್ದೆ ಇವರು ತಮಿಳುನಾಡು ರಾಜ್ಯ ದಿಂದ ಹಿಂದಿರುಗಿದವರು, ಹಾಗೂ 25827 43 ವರ್ಷದ ವ್ಯಕ್ತಿ ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ರೋಗಿ ಸಂಖ್ಯೆ 25825 65 ವರ್ಷದ ವೃದ್ದ ಮತ್ತು ರೋಗಿ ಸಂಖ್ಯೆ 25826 46 ವರ್ಷದ ವ್ಯಕ್ತಿ ಐಎಎಲ್ ಹಿನ್ನಲೆಯನ್ನು ಹೊಂದಿದ್ದಾರೆ. ಇನ್ನು ರೋಗಿ ಸಂಖ್ಯೆ 25830 55 ವರ್ಷದ ವ್ಯಕ್ತಿ ಮರಣ ಹೊಂದಿದ್ದಾರೆ.



