ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 10 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 51ಕ್ಕೆ ಏರಿದೆ. ಇದರಲ್ಲಿ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದು, ಉಳಿದ 47 ಜನ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನಲ್ಲಿ 8, ಚಿತ್ರದುರ್ಗ ಹಾಗೂ ಉಡುಪಿಯಲ್ಲಿ ತಲಾ ಒಂದು ಪಾಸಿಟಿವ್ ಕೇಸ್ ಕಂಡುಬಂದಿವೆ. ಗಯಾನಾದಿಂದ ಆಗಮಿಸಿದ್ದ ಚಿತ್ರದುರ್ಗ ಜಿಲ್ಲೆಯ 37 ವರ್ಷದ ಮಹಿಳೆ, ದುಬೈನಿಂದ ಉಡುಪಿಗೆ ಆಗಮಿಸಿದ್ದ 34 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಇನ್ನು, ಬ್ರೆಜಿಲ್, ಅರ್ಜೆಂಟೈನಾ ಪ್ರಯಾಣ ಮುಗಿಸಿ ಬಂದಿದ್ದ ಬೆಂಗಳೂರಿನ 63 ವರ್ಷದ ವ್ಯಕ್ತಿ ಹಾಗೂ 59 ವರ್ಷದ ಮಹಿಳೆಯಲ್ಲಿ ಕೋವಿಡ್-19 ಇರುವುದು ದೃಢಪಟ್ಟಿದೆ.
ದುಬೈ ಮೂಲಕ ಸ್ಪೇನ್‌ನಿಂದ ಮಾರ್ಚ್ 14 ರಂದು ಬೆಂಗಳೂರಿಗೆ ಬಂದಿದ್ದ 26 ವರ್ಷದ ಹೊಂದಿದ ಇಬ್ಬರು ವ್ಯಕ್ತಿಯಲ್ಲಿ ಸೋಂಕು ಇರುವುದು ಕಂಡು ಬಂದಿದ್ದು, ಲಂಡನ್, ಅಥೆನ್ಸ್‌ನಿಂದ ಮಾರ್ಚ್ 18ರಂದು ಬೆಂಗಳೂರಿಗೆ ಬಂದಿದ್ದ ದಂಪತಿಯಲ್ಲಿ ವೈರಸ್ ಕಾಣಿಸಿಕೊಂಡಿದೆ.
ಭಾರತದಲ್ಲಿ ಇದುವರೆಗೆ 562 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 9 ಜನ ಕೋವಿಡ್-19ನಿಂದ ಮೃತಪಟ್ಟಿದ್ದಾರೆ. 40 ಜನ ಇದುವರೆಗೂ ಕೊರೊನಾ ವೈರಸ್‌ನಿಂದ ಗುಣಮುಖರಾಗಿದ್ದಾರೆ.
ಕೊರೊನಾ ವೈರಸ್ ತಡೆಗೆ ಭಾರತದಲ್ಲಿ ಸದ್ಯ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದ್ದು, ಮೂರು ವಾರಗಳ ಕಾಲ ಇಡೀ ದೇಶ ಲಾಕ್ ಡೌನ್ ಆಗಲಿದೆ.