ಡಿವಿಜಿ ಸುದ್ದಿ, ದಾವಣಗೆರೆ: ಸಂವಿಧಾನವೇ ನಮ್ಮ ನಿಜವಾದ ಧರ್ಮ, ದೇವರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಿಧಾನದ ಸಮರ್ಪಣಾ ದಿನಾಚರಣೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಯುವ ಜನತೆ ಸಂವಿಧಾನವನ್ನು ಓದಿ ಸಂವಿಧಾನದಲ್ಲಿರುವ ಎಲ್ಲಾ ವಿಷಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳವಂತೆ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ತೂ.ಕ ಶಂಕರಯ್ಯ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂ ಎಸಿ ಸಂಚಾಲಕ ಪ್ರೊ. ವಿರೇಶ್, ಪ್ರೊ ವೆಂಕಟೇಶ್ ಬಾಬು, ಪ್ರೊ. ಭೀಮಣ್ಣ ಸುನಗಾರ, ಸಾಂಸ್ಕಂತಿಕ ಸಂಚಾಲಕಿ ಪ್ರೊ. ಗೌರಮ್ಮ ಎಮ್, ಪ್ರೊ. ಶಿವಬಸಪ್ಪ ಎತ್ತಿನಹಳ್ಳಿ, ಡಾ. ಬಿ. ವೀರಪ್ಪ, ಪ್ರೊ. ಎನ್. ಎಂ ನಾಗರಾಜ್, ಡಾ. ಕರಿಬಸಪ್ಪ, ಪ್ರೊ.ಲಕ್ಷಣ, ಪ್ರೊ. ಮಲ್ಲಯ್ಯ, ಪ್ರೊ.ಬಸವರಾಜ್ ಮತ್ತು ಬೋಧಕ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



