ಡಿವಿಜಿ ಸುದ್ದಿ, ಬೆಂಗಳೂರು: ಚಲನಚಿತ್ರ ಮತ್ತು ಟಿವಿ ಧಾರವಾಹಿಗಳ ಒಳಾಂಗಣ ಮತ್ತು ಹೊರಾಂಗಣ ಚಿತ್ರೀಕರಣ, ಪ್ರೀ ಮತ್ತು ಪೋಸ್ಟ್ ಪ್ರೊಡಕ್ಷನ್ ನಡೆಸಲು ರಾಜ್ಯ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ.
ಎಡಿಟಿಂಗ್, ಡಬ್ಬಿಂಗ್, ಸೌಂಡ್ ಮಿಕ್ಸಿಂಗ್, ವಿಷುವಲ್ ಎಫೆಕ್ಟ್, ಕಂಪ್ಯೂಟರ್ ಗ್ರಾಫಿಕ್, ಡಿಜಿಟಲ್ ಇಂಟರ್‌ಮೀಡಿಯೇಟ್ ಕಲರ್ ಕರೆಕ್ಷನ್ ಮತ್ತು ಎಲ್ಲ ಇತರ ಪೋಸ್ಟ್ ಪ್ರೊಡಕ್ಷನ್, ಸ್ಕ್ರಿಪ್ಟ್ ಸೆಷನ್ ಪ್ರೊಡಕ್ಷನ್ ಪ್ಲಾನಿಂಗ್‌ಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ ಇಬ್ಬರು ಗರಿಷ್ಠ 10 ಜನರನ್ನು ಮೀರ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಸರ್ಕಾರದ ಮಾರ್ಗ ಸೂಚಿ ಈ ರೀತಿ ಇದೆ…
- 60 ವರ್ಷ ದಾಟಿದವರು, ಗರ್ಭಿಣಿಯರು, ಅನಾರೋಗ್ಯಕ್ಕೆ ತುತ್ತಾದವರು ಮುನ್ನೆಚ್ಚರಿಕೆ ವಹಿಸಬೇಕು.
- ಸಾರ್ವಜನಿಕರಿಗೆ ನೇರ ಸಂಪರ್ಕ ಬಾರದಂತೆ ಎಚ್ಚರಿಕೆ ವಹಿಸಬೇಕು.
- 10 ವರ್ಷದ ಒಳಗಿನವರು ಮತ್ತು 60 ವರ್ಷ ಮೇಲ್ಪಟ್ಟವರು ವೈದ್ಯಕೀಯ ಪ್ರಮಾಣ ಪತ್ರ ಇಲ್ಲದೇ ಸೆಟ್ ಒಳಗೆ ಪ್ರವೇಶಕ್ಕೆ ಅವಕಾಶ ನೀಡಬಾರದು.
- ದೊಡ್ಡ ಕೂಟಗಳು ಮತ್ತು ಸಭೆಗಳನ್ನು ಆಯೋಜಿಸಬಾರದು. ಸ್ಟುಡಿಯೋ ಆವರಣದಲ್ಲಿ ಯಾರಿಗೂ ಉಳಿಯಲು ಅವಕಾಶ ನೀಡಬಾರದು.
- ಬಹುಪಾಲು ಚಿತ್ರೀಕರಣವನ್ನು ಸೆಟ್ ಒಳಗೇ ಮಾಡಬೇಕು. ಹೊರಾಂಗಣ ಚಿತ್ರೀಕರಣವನ್ನು ಆದಷ್ಟು ತಪ್ಪಿಸಬೇಕು.
- ಕಂಟೈನ್‌ಮೆಂಟ್ ವಲಯದಲ್ಲಿ ಚಿತ್ರೀಕರಣಕ್ಕೆ ಅವಕಾಶವಿಲ್ಲ.
- ಕಂಟೈನ್‌ಮೆಂಟ್ ವಲಯದ ಕಲಾವಿದರು ಚಿತ್ರೀಕರಣ ಮತ್ತು ಇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ



