ಡಿವಿಜಿ ಸುದ್ದಿ, ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಜಾಲ ಸಿಸಿಬಿಯ ಬಂಧನದಲ್ಲಿ ಇರುವಾಗಲೇ, ಗಾಗಿಣಿ ನಟನೆಯ ಕನ್ನಡದ ‘ದಿ ಟೆರರಿಸ್ಟ್’ ಸಿನಿಮಾವು ಹಿಂದಿಗೆ ರಿಮೇಕ್ ಆಗಲಿದಯಂತೆ. ಈ ಬಗ್ಗೆ ನಿರ್ದೇಶಕ ಪಿ.ಸಿ. ಶೇಖರ್ ಟ್ವೀಟ್ ಮೂಲಕ ಖಚಿತಪಡಿದ್ದಾರೆ.
ಗಿರೀಶ್ ಶಿವಣ್ಣ, ಕೀರ್ತಿ ಭಾನು, ರವಿ ಭಟ್ ಮತ್ತು ಮನು ಹೆಗಡೆ ನಟಿಸಿದ್ದ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು ಅಲಂಕಾರ್ ಪಾಂಡಿಯನ್. ರಾಗಿಣಿ ಇದರಲ್ಲಿ ರೇಷ್ಮಾ ಹೆಸರಿನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.
Hi friends very happy to share that my movie #TheTerrorist by #RaginiDwivedi produced by #AlankarPandian hindi rights has been acquired by Mr.Vishal Rana, #EchelonProduction… Sonam Kapoor or Vidhya Balan may do the movie…Going on the floor soon… pic.twitter.com/8kAplzQZBv
— PC Shekar (@PCSekar) September 10, 2020
ದಿ ಟೆರರಿಸ್ಟ್ ಚಿತ್ರದ ಹಿಂದಿಯ ರಿಮೇಕ್ ಹಕ್ಕುಗಳನ್ನು ವಿಶಾಲ್ ರಾಣಾ ಪಡೆದುಕೊಂಡಿದ್ದಾರೆ. ಸೋನಂ ಕಪೂರ್ ಅಥವಾ ವಿದ್ಯಾ ಬಾಲನ್ ಅವರು ರಾಗಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಶೀಘ್ರವೇ, ಈ ಸಿನಿಮಾ ಸೆಟ್ಟೇರಲಿದೆ ಎಂದು ನಿರ್ದೇಶಕ ಪಿ.ಸಿ. ಶೇಖರ್ ಟ್ವೀಟ್ ಮಾಡಿದ್ದಾರೆ.



