ಡಿವಿಜಿ ಸುದ್ದಿ, ಚನ್ನಗಿರಿ: ತಾಲ್ಲೂಕಿನ ಕೋಗಲೂರು ಗ್ರಾಮದ ಸರ್ಕಾರಿ ಶಾಲಾ ಮೈದಾನದ ಅವ್ಯಸ್ಥೆಗೆ ಬಗ್ಗೆ ಇವತ್ತು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
ಕೋಗಲೂರು ಪಂಚಾಯಿತಿಯಲ್ಲಿ ಅಧ್ಯಕ್ಷೆ ಅನುಭಾಗ್ಯಮ್ಮ ಜಗದೀಶ್ ನೇತೃತ್ವದಲ್ಲಿ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮದ ಮುಖಂಡ ಬಿಜಿ ಸ್ವಾಮಿ, ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದ ಅವ್ಯವಸ್ಥೆ ಬಗ್ಗೆ ತರಾಟೆ ತಗೆದುಕೊಂಡರು.
ಈ ಹಿಂದೆ ಈ ಮೈದಾನದಲ್ಲಿ ತಾಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಕ್ರೀಡೆಗಳು ನಡೆಯುತ್ತಿದ್ದವು. ಈಗ ಈ ಮೈದಾನವೆಲ್ಲ ನೀರು ತುಂಬಿ ಹುಲ್ಲು ಪೊದೆಗಳು ಬೆಳೆದು ಕ್ರೀಮಿ ಕೀಟ, ಹಾವು, ಚೇಳುಗಳು ವಾಸಿಸುವ ಸ್ಥಳವಾಗಿದೆ. ಆಟದ ಮೈದಾನವಿದ್ದೂ ಇಲ್ಲಾದಂತಗಿದೆ. ಅನೇಕ ಸಲ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಪ್ರೌಢಶಾಲಾ ಮುಖ್ಯ ಶಿಕ್ಷಕ ಎಂ.ಬಿ. ಪ್ರಭಾಕರ್ ಮಾತನಾಡಿ, ಶಾಲೆಯಲ್ಲಿ 275 ಮಕ್ಕಳಿದ್ದು ಶೌಚಾಲಯದ ಅವಶ್ಯಕ ಇದೆ ನೀರಿನ ಸೌಲಭ್ಯಕ್ಕಾಗಿ ಪೈಪ್ ಲೈನ್ ದುರಸ್ತಿ ಮಾಡಿಸಿ ಶಾಲೆಗೆ ಅನುಕೂಲ ಮಾಡಿ ಕೊಡಬೇಕೆಂದರು.
ಪ್ರಾಂಶುಪಾಲ ಬಸವರಾಜಪ್ಪ ಮಾತನಾಡಿ, ಕಾಲೇಜಿನಲ್ಲಿ ಹಂಗಾಮಿಯಾಗಿ ನೇಮಿಸಿಕೊಂಡಿರುವ ಡಿ ಗ್ರೂಪ್ ನೌಕರನಿಗೆ ನಾವುಗಳು ಕೊಡುವ ವೇತನ ಬಹಳ ಕಡಿಮೆಯಾಗಿದೆ. ಗ್ರಾಪಂ ವತಿಯಿಂದ ಸಹಾಯ ಮಾಡಬೇಕು ಮತ್ತು ಉಪನ್ಯಾಸಕರಿಗೆ ಯಾವುದೇ ಶೌಚಾಲಯ ಇಲ್ಲ. ಕೂಡಲೇ ನಿರ್ಮಿಸಿ ಕೊಡಬೇಕೆಂದು ಮನವಿ ಮಾಡಿದರು.
ಕರ್ನಾಟಕ ಗ್ರಾಮೀಣಾ ಭ್ಯಾಂಕ್ ಮ್ಯಾನೇಜರ್ ನಾಗರಾಜ್ , ಕೃಷಿ ಅಧಿಕಾರಿ ಎನ್. ಹಾಲಪ್ಪ , ಪಶು ವೈದ್ಯಾದಿಕಾರಿ ಸುಧೀರ್ , ಅರೋಗ್ಯ ಇಲಾಖೆಯ ಕರಿಬಸಪ್ಪ , ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು , ಗ್ರಾಪಂ ಉಪಾಧ್ಯಕ್ಷೆ ಶಂಕರಮ್ಮ , ಸದಸ್ಯರಾದ ಸುಮಾ , ಗೀತಮ್ಮ , ವಿರೇಶ್ , ಚಿದಾನಂದಯ್ಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬಿ. ಶೇರ್ ಆಲಿ , ಕಾರ್ಯದರ್ಶಿ ಕರಿಸಿದ್ದಪ್ಪ ಹಾಗೂ ಗ್ರಾಪಂ ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು.