ಡಿವಿಜಿ ಸುದ್ಧಿ, ಚಿತ್ರದುರ್ಗ: ಕಥೆಗಳು ಸಂವೇದಶೀಲ, ಕ್ರಿಯಾತ್ಮಕ ಸಂಬಂಧ ಕಟ್ಟುವ ಕೆಲಸ ಮಾಡಬೇಕೆಂದು ಡಾ. ರೇವಣ್ಣ ಬಳ್ಳಾರಿ ಹೇಳಿದರು.
ಚಿತ್ರದುರ್ಗದ ರೋಟರಿ ಭವನದಲ್ಲಿ ಸಮಗ್ರ ಸಾಹಿತ್ಯ ವೇದಿಕೆ, ದಾವಣಗೆರೆ, ಭರಮಸಾಗರ, ಸಿರಿಗನ್ನಡ ವೇದಿಕೆ, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಕನ್ನಡ ರಾಜ್ಯೋ ತ್ಸವ, ಕಥಾಗೋಷ್ಠಿ ಹಾಗೂ ಕಥಾ ಸ್ಪರ್ಧೆಗಳಿಗೆ ಬಹುಮಾನ ಡಾ. ಬಿ. ರಾಜಶೇಖರಪ್ಪ ಗೌರವ ಸನ್ಮಾನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ನಮ್ಮ ಉಸಿರಾಗಬೇಕು. ಆಗ ಮಾತ್ರ ಈ ನಾಡಿನಲ್ಲಿ ಹುಟ್ಟಿದ್ದಕ್ಕೆ ಸಾರ್ಥಕ ಎಂದರು.
ಸನ್ಮಾನ ಸ್ವೀಕರಿಸಿದ ಡಾ. ಬಿ. ರಾಜ ಶೇಖರಪ್ಪ ಮಾತಾಡಿ, ಯಾವುದೇ ಅರ್ಜಿ ಹಾಕದೆ 64ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ ಎಂದರು.
ಖ್ಯಾತ ಕತೆಗಾರ ಆನಂದ್ ಋಗ್ವೇದಿ ಮಾತನಾಡಿ, ಕಥೆ ನಮ್ಮೊಳಗೇ ನಿಮ್ಮೊಳಗೆ, ಕಥೆಯೊಳಗೆ ನಾವಿರುತ್ತೆವೇ, ರಾಮಾಯಣ, ಮಹಾ ಭಾರತ, ಚಿಕ್ಕ ಕಥೆಗಳು ರೋಚಕ ಕಥೆಗಳು ಇರುತ್ತವೆ. ಕಥೆಗಳು ನಡೆದು ಬಂದ ಹಾದಿ ಬಗ್ಗೆ ವಿಸ್ಥಾರವಾಗಿ ಉಪನ್ಯಾಸ ನೀಡಿದರು.
ಚಿನಮೂಲಾದ್ರಿ ಸಾಹಿತ್ಯ ವೇದಿಕೆ ದಯಾ ಪುತ್ತೂರುಕರ್ ಪ್ರಾಸ್ಟಾವಿಕ ಮಾತಾಡಿದರು. ಸಿರಿಗನ್ನಡ ವೇದಿಕೆ ಅಧ್ಯಕ್ಷರು ಸಿ.ಕೆ.ಗೀತಾ ಸ್ವಾಗತಿಸಿದರು. ಜ್ಯೋತಿ ಲಕ್ಷ್ಮಿ ನಿರೂಪಿಸಿದರು. ವ್ಯೆದ್ಯರು ತ್ಯಾಗರಾಜ್, ಎಂ. ಮಂಜಣ್ಣ , ಪಿ. ಎಂ. ಶಿವಾನಂದಸ್ವಾಮಿ ಉಪಸ್ಥಿತರಿದ್ದರು.